ಕರ್ನಾಟಕ

karnataka

ETV Bharat / state

ಸೋತರೂ ಧೃತಿಗೆಡಲಿಲ್ಲ.. ಮತದಾರರಿಗೆ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಿದ ಅಭ್ಯರ್ಥಿ - ಚಿಕ್ಕಬಳ್ಳಾಪುರ ಲೇಟೆಸ್ಟ್ ನ್ಯೂಸ್

ಗಂಗಸಂದ್ರ ಪಂಚಾಯತ್​ನ ವಾರ್ಡ್​ವೊಂದರ ಅಭ್ಯರ್ಥಿ ಸುನೀಲ್ ಕೇವಲ ಎರಡು ಮತಗಳಿಂದ ಸೋಲನ್ನನುಭವಿಸಿದ್ದರು. ಆದರೆ, ಸೋಲನ್ನು ಪರಿಗಣಿಸದೇ ಮತದಾರರಿಗೆ ಸಿಹಿ ಹಂಚಿದ್ದಾರೆ. ಜೊತೆಗೆ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅಧಿಕಾರಿಗಳ‌ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

candidate thanks to voters who failed in grama panchayat election
ಸೋತರೂ ಧೃತಿಗೆಡಲಿಲ್ಲ....ಮತದಾರರಿಗೆ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಿದ ಅಭ್ಯರ್ಥಿ

By

Published : Jan 7, 2021, 12:02 PM IST

ಚಿಕ್ಕಬಳ್ಳಾಪುರ: ಸೋತ ಅಭ್ಯರ್ಥಿಯೋರ್ವ ತನ್ನ ವಾರ್ಡ್​​ನ ಮನೆ ಮನೆಗೂ ತೆರಳಿ ಸಿಹಿ ಹಂಚಿ ಜನರ ಸಮಸ್ಯೆಗಳನ್ನು ತಿಳಿಸುವಂತೆ ಮನವಿ ಮಾಡಿ, ಮುಂದಿನ ಚುನಾವಣೆಯಲ್ಲಿ ಮತಗಳನ್ನು ನೀಡುವಂತೆ ವಿನೂತನ ಪ್ರಚಾರ ನಡೆಸಿ ಗ್ರಾಮಸ್ಥರ ಮನೆ ಮಾತಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

ಮತದಾರರಿಗೆ ಸಿಹಿ ಹಂಚಿ ಕೃತಜ್ಞತೆ ಸಲ್ಲಿಸಿದ ಅಭ್ಯರ್ಥಿ

ಗಂಗಸಂದ್ರ ಪಂಚಾಯತ್​ನ ಪಕ್ಷವೊಂದರ ಬೆಂಬಲಿತ ಅಭ್ಯರ್ಥಿ ಸುನೀಲ್ ಕೇವಲ ಎರಡು ಮತಗಳಿಂದ ಸೋಲನ್ನನುಭವಿಸಿದ್ದರು. ಆದರೆ, ಸೋಲನ್ನು ಪರಿಗಣಿಸದೇ ಮತದಾರರಿಗೆ ಸಿಹಿ ಹಂಚಿದ್ದಾರೆ. ಜೊತೆಗೆ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅಧಿಕಾರಿಗಳ‌ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಕಣ್ಣಿಗೆ ಬಟ್ಟೆ ಕಟ್ಟಿ ಹಾರ್ಮೋನಿಯಂ ನುಡಿಸುತ್ತಾನೆ ಈ 13ರ ಪೋರ!

ತನ್ನ ಕ್ಷೇತ್ರದ ಜನತೆ ನೀಡಿದ ಅತ್ಯಮೂಲ್ಯ ಮತವನ್ನು ತನ್ನ ಗೆಲುವೆಂದು ಭಾವಿಸಿ, ಗಂಗಸಂದ್ರ ಪಂಚಾಯತ್​​​ ವ್ಯಾಪ್ತಿಯಲ್ಲಿ ಸ್ಪರ್ಧಿಸಿದ್ದ ವಾರ್ಡ್​​ನ ಪ್ರತಿ ಮನೆ ಮನೆಗೂ ತೆರಳಿ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಸೋತ ಅಭ್ಯರ್ಥಿ ಸುನೀಲ್ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details