ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ರಾಜ್ಯದೆಲ್ಲೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ನಡುವೆ ಚಿಕ್ಕಬಳ್ಳಾಪುರದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 77.67 ಲೀಟರ್ ಅಕ್ರಮ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದಾನೆ.
ಅಬಕಾರಿ ಅಧಿಕಾರಿಗಳ ದಾಳಿ: ಅಕ್ರಮ ಮದ್ಯ ವಶ - ಮನೆಯಲ್ಲಿ ಅಕ್ರಮ ಮದ್ಯ
ಲಾಕ್ಡೌನ್ ಜಾರಿಯಾದ ಬಳಿಕ ಅಕ್ರಮ ಮದ್ಯ ಮಾರಾಟ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇಲ್ಲಿನ ಬಾಗೇಪಲ್ಲಿ ತಾಲೂಕು ಚೇಳೂರು ವ್ಯಾಪ್ತಿಯ ಕಂದಕೂರು (ಆಂಧ್ರ ಪ್ರದೇಶ ಗಡಿ) ಬಳಿ ಅಬಕಾರಿ ಇಲಾಖೆಯ ವಿಶ್ವನಾಥ ಬಾಬು ಅವರ ನೇತೃತ್ವದಲ್ಲಿ ದಾಳಿ ನಡೆಸಿ 77.67 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಅನ್ಯ ರಾಜ್ಯಗಳಿಗೆ ಮದ್ಯ ಸಾಗಾಟ: ಅಬಕಾರಿ ಅಧಿಕಾರಿಗಳ ದಾಳಿ
ಬಾಗೇಪಲ್ಲಿ ತಾಲೂಕು ಚೇಳೂರು ವ್ಯಾಪ್ತಿಯ ಕಂದಕೂರು (ಆಂಧ್ರ ಪ್ರದೇಶ ಗಡಿ) ಬಳಿ ಅಬಕಾರಿ ಇಲಾಖೆಯ ವಿಶ್ವನಾಥ ಬಾಬು ಅವರ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ನಾಗರಾಜು ಬಿನ್ ಯಾಮನ್ನ ಎಂಬುವರ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ. ವಿವಿಧ ಬ್ರ್ಯಾಂಡ್ಗಳ ಸುಮಾರು 77.67 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ತನಿಖೆ ಮುಂದುವರೆದಿದೆ.