ಕರ್ನಾಟಕ

karnataka

ETV Bharat / state

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ 10 ಕುಟುಂಬಗಳು ಮತ್ತೆ ಹಿಂದೂ ಧರ್ಮ ಸೇರ್ಪಡೆ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಸುಮಾರು 10 ಕುಟುಂಬಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಸೇರ್ಪಡೆಗೊಳಿಸಲಾಗಿದೆ. ಗೌರಿಬಿದನೂರು ತಾಲೂಕಿನ ಭಾರತಮಾತಾ ಸೇವಾ ಟ್ರಸ್ಟ್ ಅಡಿಯಲ್ಲಿ ಪೂಜೆ ನಡೆಸುವ ಮೂಲಕ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.

gouribidanuru
ಹಿಂದೂ ಧರ್ಮಕ್ಕೆ ಸೇರ್ಪಡೆ

By

Published : Aug 24, 2021, 8:18 AM IST

Updated : Aug 24, 2021, 1:13 PM IST

ಗೌರಿಬಿದನೂರು (ಚಿಕ್ಕಬಳ್ಳಾಪುರ):ಭಾರತ ಮಾತಾ ಸೇವಾ ಟ್ರಸ್ಟ್ ಅಡಿಯಲ್ಲಿ ಇಂದು ವಿಶೇಷ ಪೂಜೆ ನಡೆಸುವ ಮೂಲಕ ‌ತಾಲೂಕಿನ ನಾಗಸಂದ್ರ ಗ್ರಾಮದ ಸುಮಾರು 10 ಕುಟುಂಬಗಳಿಗೆ ಸೇರಿದ 100ಕ್ಕೂ ಅಧಿಕ ಜನರನ್ನು ಮರಳಿ ಹಿಂದೂ ಧರ್ಮಕ್ಕೆ ಬರಮಾಡಿಕೊಳ್ಳಲಾಯಿತು.

ಹಿಂದೂ ಧರ್ಮಕ್ಕೆ ಮರಳಿ ಸೇರ್ಪಡೆ ಕಾರ್ಯಕ್ರಮ

ತಾಲೂಕಿನ ಇತಿಹಾಸಪ್ರಸಿದ್ಧ ವಿದುರಾಶ್ವತ್ಥ ಸ್ವಾಮಿ ದೇಗುಲದ ಸಭಾಂಗಣದಲ್ಲಿ ವಿವಿಧ ಹೋಮ- ಹವನಗಳನ್ನು ನಡೆಸಿ, ಪೂಜೆ ಸಲ್ಲಿಸಿ ನಂತರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಸೇರ್ಪಡೆಗೊಳಿಸಲಾಯಿತು.

'ಮರುಳು ಮಾತಿಗೆ ಮಾರು ಹೋಗಿ ಮತಾಂತರಗೊಳ್ಳುತ್ತಿರುವುದು ಹೆಚ್ಚುತ್ತಿದೆ. ಯಾವುದೇ ಧರ್ಮವಾಗಿರಲಿ ಜೀವನ ನಡೆಸುವುದಕ್ಕೆ ತಮ್ಮದೇ ಆದ ಆತ್ಮಬಲ, ದೈಹಿಕ ಬಲ, ಮನಃಶಾಂತಿ ಇಟ್ಟುಕೊಳ್ಳಬೇಕು. ಮತಾಂತರಗೊಳ್ಳುವುದರಿಂದಲೇ ಸಮಸ್ಯೆ ಬಗೆಹರಿಯಲಿದೆ ಎಂಬುದು ತಪ್ಪು ಕಲ್ಪನೆ'.

- ಎನ್.ಎಂ ರವಿನಾರಾಯಣರೆಡ್ಡಿ, ಅಧ್ಯಕ್ಷ ,ಭಾರತಮಾತಾ ಸೇವಾ ಟ್ರಸ್ಟ್

ಈ ವೇಳೆ ಭಾರತ ಮಾತಾ ಸೇವಾ ಟ್ರಸ್ಟ್ ವತಿಯಿಂದ ಆರೋಗ್ಯ ಕಾರ್ಡ್ ಹಸ್ತಾಂತರಿಸಲಾಯಿತು.

Last Updated : Aug 24, 2021, 1:13 PM IST

ABOUT THE AUTHOR

...view details