ಕೊಳ್ಳೇಗಾಲ:ಗಣೇಶನ ಹಬ್ಬಕ್ಕೆಂದು ತನ್ನ ಮಾವನ ಮನೆಗೆ ಬಂದಿದ್ದ ಯುವತಿಯೋರ್ವಳು ಹಬ್ಬ ಮುಗಿದ ನಾಲ್ಕನೇ ದಿನಕ್ಕೆ ದಿಢೀರ್ ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಣೇಶನ ಹಬ್ಬಕ್ಕೆಂದು ಮಾವನ ಮನೆಗೆ ಬಂದಿದ್ದ ಯುವತಿ ನಾಪತ್ತೆ
ಮಾವನ ಮನೆಗೆ ಗಣೇಶನ ಹಬ್ಬಕ್ಕೆ ಬಂದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ನಾಪತ್ತೆ
ಹನೂರು ಪಟ್ಟಣದ ಮುತ್ತು ರಾಜು ಎಂಬುವರ ಪುತ್ರಿ ಸುಜಾತ (19) ಕಾಣೆಯಾಗಿರುವ ಯುವತಿ. ಈಕೆ ತಾಲೂಕಿನ ಸೂರಪುರ ಗ್ರಾಮದಲ್ಲಿರುವ ತನ್ನ ಮಾವ ಸರ್ವೇಶ್ ಮನೆಗೆ ಹಬ್ಬಕ್ಕೆಂದು ಬಂದಿದ್ದಳು. ಹಬ್ಬ ಮುಗಿಸಿ ಮನೆಯಲ್ಲಿಯೇ ಇದ್ದ ಸುಜಾತ ಆ.26 ರಂದು ಮನೆಯಿಂದ ಹೊರಗೆ ಹೋದವಳು ನಾಪತ್ತೆಯಾಗಿದ್ದಾಳೆ. ಕುಟುಂಬದವರು ಯುವತಿಯನ್ನು ಎಲ್ಲಾ ಕಡೆಗಳಲ್ಲಿ ಹುಡುಕಿದ್ದು ಪತ್ತೆಯಾಗದ ಕಾರಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಯುವತಿ ಪತ್ತೆಗೆ ಕ್ರಮವಹಿಸಿದ್ದಾರೆ.