ಕರ್ನಾಟಕ

karnataka

ETV Bharat / state

ಕೊರೊನಾಗೆ ಸೆಲ್ವನಾಯ್ಕ್ ಬಲಿ.. ಕಳೆದ ವರ್ಷ ಚೀನಾದಿಂದ ಹಿಂತಿರುಗಿದ್ದ ಯುವ ವಿಜ್ಞಾನಿ.. - ವಿಜ್ಞಾನಿ ಸೆಲ್ವನಾಯ್ಕ್ ಸಾವು ಸುದ್ದಿ

ಕಳೆದ ವರ್ಷವಷ್ಟೇ ಚೀನಾದಿಂದ ಭಾರತಕ್ಕೆ ಆಗಮಿಸಿದ್ದ ಯುವ ವಿಜ್ಞಾನಿ ಸೆಲ್ವನಾಯ್ಕ್( 38) ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ..

selvanayak
selvanayak

By

Published : May 23, 2021, 7:12 PM IST

ಚಾಮರಾಜನಗರ :ಕೊರೊನಾಗೆ ಯುವ ವಿಜ್ಞಾನಿಯೊಬ್ಬರು ಬಲಿಯಾಗಿರುವ ಘಟನೆ ಇಂದು ಹನೂರು ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ನಡೆದಿದೆ.

ಸೆಲ್ವನಾಯ್ಕ್( 38) ಮೃತ ದುರ್ದೈವಿ. ಗುಂಡಾಪುರ ಗ್ರಾಮದ ಸುಬ್ಬಾನಾಯ್ಕ್ ಮತ್ತು ಸುಶೀಲಾಬಾಯಿಯ ಮಗನಾಗಿದ್ದ ಇವರು ಚೀನಾದಲ್ಲಿ ವಿಜ್ಞಾನಿಯಾಗಿ ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. 2019ರ ಡಿಸಂಬರ್ ತಿಂಗಳು ಚೀನಾದಲ್ಲಿ ಕೊರೊನಾ ಸೋಂಕು ಹರಡಿದ್ದ ವೇಳೆ ಸ್ವಗ್ರಾಮಕ್ಕೆ ಬಂದಿದ್ದರು.

ಕಳೆದ 15 ದಿನದ ಹಿಂದೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ, ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಕಾಮಗೆರೆಯ‌ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ಇಂದು 415 ಮಂದಿಗೆ ಸೋಂಕು :ಇಂದು ಜಿಲ್ಲೆಯಲ್ಲಿ ಹೊಸದಾಗಿ 415 ಕೋವಿಡ್ ಕೇಸ್ ಪತ್ತೆಯಾಗಿದ್ದು,410 ಮಂದಿ ಗುಣಮುಖರಾಗಿದ್ದಾರೆ. 1744 ಮಂದಿ ಹೋಂ ಐಸೋಲೇಷನ್​ನಲ್ಲಿದ್ದು 57 ಮಂದಿ ಐಸಿಯುಗೆ ದಾಖಲಾಗಿದ್ದಾರೆ.

ಇವತ್ತು 7 ಮಂದಿ ಸೋಂಕಿತರು ಮೃತಪಟ್ಟಿದ್ದು, ಮೃತರ ಸಂಖ್ಯೆ 347ಕ್ಕೆ ಏರಿಕೆಯಾಗಿದೆ. 5395 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ABOUT THE AUTHOR

...view details