ಗುಂಡ್ಲುಪೇಟೆ(ಚಾಮರಾಜನಗರ) :ತಾಲೂಕಿನ ಹಂಗಳ ಹೋಬಳಿ ಕೇಂದ್ರದ ಬಡಾವಣೆಯಲ್ಲಿ ಕಳೆದ ಹನ್ನೆರಡು ದಿನದಿಂದ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಈ ಹಿನ್ನೆಲೆ ಒಂದು ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಇರುವ ಕೊಳವೆ ಬಾವಿಯಿಂದ ನೀರು ತಂದು ಬಳಕೆ ಮಾಡುತ್ತಿದ್ದಾರೆ.
ಹಲವು ದಿನಗಳಿಂದ ಈ ಬಡಾವಣೆಗಿಲ್ಲ ನೀರು! - chamarajanagara latest news
ಈ ಬಡಾವಣೆಗೆ ಕಳೆದ 12 ದಿನಗಳಿಂದ ನೀರು ಬಿಡದ ಕಾರಣ ಇಲ್ಲಿನ ಸ್ಥಳೀಯರು ಭಾರೀ ತೊಂದರೆಗೆ ಒಳಗಾಗಿದ್ದಾರೆ. ಕೆರೆಯ ಸಮೀಪದ ಕೊಳವೆ ಬಾವಿಯಿಂದ ನೀರು ತರುತ್ತಿದ್ದು, ಈ ನೀರು ಕುಡಿದ ಪರಿಣಾಮ ಹಲವಾರು ಜನರ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.
ಹಲವು ದಿನಗಳಿಂದ ಈ ಬಡಾವಣೆಗಿಲ್ಲ ನೀರು!
ಈಗಾಗಲೇ ಬಡಾವಣೆಯ ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಪುರುಷರಾದರೆ ಸೈಕಲ್ ಅಥವಾ ಬೈಕ್ಗಳಿಂದ ನೀರು ತರುತ್ತಾರೆ. ಮಹಿಳೆಯರು ಕಿಲೋಮೀಟರ್ ಗಟ್ಟಲೇ ತಲೆಯ ಮೇಲೆ ನರು ಹೊರಬೇಕಿದೆ ಎಂದು ಬಾಬುಜಗಜೀವನ್ ರಾಂ ಬಡಾವಣೆಯ ರಾಜೇಶ್ ನೋವು ತೋಡಿಕೊಂಡಿದ್ದಾರೆ.
ಪ್ರತಿದಿನ ಕೆಲಸಕ್ಕೆ ಹೋಗುವ ಮುಂಚೆ ನೀರು ತರಲೇ ಬೇಕು. ಇದರಿಂದಾಗಿ ಅನೇಕರು ದಿನದ ಕೂಲಿಯನ್ನೆ ಕಳೆದುಕೊಳ್ಳಬೇಕಿದೆ. ಕನಿಷ್ಟ ವಾರಕ್ಕೆ ಎರಡು ಬಾರಿಯಾದರೂ ನೀರು ಬಿಡುವಂತೆ ಗ್ರಾಮ ಪಂಚಾಯತಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.