ಕರ್ನಾಟಕ

karnataka

ETV Bharat / state

ರಂಗೇರಿದ ಗಡಿಜಿಲ್ಲೆ ಲೋಕಸಮರ : ಕಾಂಗ್ರೆಸ್- ಬಿಜೆಪಿ ನಡುವೆ ಡಿಜಿಟಲ್​ ವಾರ್​​..!! - ಹೈಕಮಾಂಡ್

ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...?

ಧ್ರುವನಾರಾಯಣ್, ವಿ.ಶ್ರೀನಿವಾಸ ಪ್ರಸಾದ್

By

Published : Mar 28, 2019, 9:47 PM IST

ಚಾಮರಾಜನಗರ: ಲೋಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ವಿರುದ್ಧ ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್​ ಕಣಕ್ಕಿಳಿದ ಮೇಲೆ ಜಿಲ್ಲಾ ರಾಜಕಾರಣ ರಂಗೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ವಾಕ್ಸಮರ ತಾರಕ್ಕೇರಿದೆ.

ಕೆಲವು ದಿನದ ಹಿಂದೆಯಷ್ಟೆ ವಿ.ಶ್ರೀನಿವಾಸ್​ ಪ್ರಸಾದ್​​ ಅರ್ಜುನ, ಆರ್.ಧ್ರುವನಾರಾಯಣ ಕರ್ಣ ಹಾಗೂ ನರೇಂದ್ರ ಮೋದಿ ಕೃಷ್ಣನಂತೆ ಚಿತ್ರಿಸಿ ಚಾಮರಾಜನಗರ ಕುರುಕ್ಷೇತ್ರದ ಸಂದೇಶಗಳನ್ನು ಹರಿಬಿಟ್ಟಿದ್ದರು. ಬಳಿಕ, ವಿ.ಶ್ರೀನಿವಾಸಪ್ರಸಾದ್​ಗೆ 13 ಪ್ರಶ್ನೆಗಳು ಎಂಬ ಸಂದೇಶ ರವಾನಿಸಿದ್ದ ಕಾಂಗ್ರೆಸ್​ಪರ ನೆಟ್ಟಿಗರಿಗೆ ಬಿಜೆಪಿ ಕಾರ್ಯಕರ್ತರು ಕೂಡ ಮರು ಉತ್ತರ ನೀಡಿದ್ದಾರೆ.

ನೆಟ್ಟಿಗರು ಶ್ರೀನಿವಾಸ ಪ್ರಸಾದ್​ಗೆ ಕೇಳಿದ್ದ ಪ್ರಶ್ನೆಗಳು
- 2008ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಖರ್ಗೆ ಅವರು ನಂಜನಗೂಡಿನಿಂದಲೇ ಸ್ಪರ್ಧಿಸುವಂತೆ ಧ್ರುವನಾರಾಯಣ ರವರಿಗೆ ತಾಕೀತು ಮಾಡಿದಾಗ, ನಂಜನಗೂಡಿನಲ್ಲಿ ಸ್ಪರ್ಧಿಸುವುದಾಗಿ ಪ್ರಸಾದ್ ನನ್ನ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಕೊಳ್ಳೇಗಾಲದಲ್ಲೇ ಸ್ಪರ್ಧಿಸುವುದಾಗಿ ಹೇಳಿ ನಿಮಗೆ ನಂಜನಗೂಡಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸುಳ್ಳೇ....?


- 2008ರಲ್ಲಿ ಆಗಷ್ಟೆ ಕೊಳ್ಳೇಗಾಲದಿಂದ ಗೆದ್ದಿದ್ದ ಧ್ರುವನಾರಾಯಣ್ ರವರು 2009ರ ಲೋಕಸಭಾ ಚುನಾವಣೆಯಲ್ಲಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಧ್ರುವನಾರಾಯಣ್ ರವರನ್ನು ಕಣಕ್ಕಿಳಿಯುವಂತೆ ಒತ್ತಡ ಹೇರಿದಾಗ ಸ್ಪರ್ದಿಸಲು ಒಲ್ಲೆ ಎಂದಾಗ ಒತ್ತಾಯಪೂರ್ವಕವಾಗಿ ನಿಲ್ಲಿಸಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸಿ ಶಿವಣ್ಣ ಅವರ ಬೆನ್ನಿಗೆ ಚೂರಿ ಹಾಕಿದ್ದು ಮರೆತು ಬಿಟ್ಟರೇ...?

- 2013ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನೀವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಾಗ ನಿಮ್ಮ ಬೆನ್ನಿಗೆ ನಿಂತು ನಾನೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಅಖಾಡಕ್ಕಿಳಿದು ಗೆಲ್ಲಿಸಿಕೊಂಡು ಬಂದ ಧ್ರುವನಾರಾಯಣ್ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಸುಳ್ಳೆ...? ಗಮನಾರ್ಹವೆಂದರೆ, ಅಂದು ಜೆಡಿಎಸ್ ಅಲೆಯಲ್ಲಿ ಗೆಲುವಿನ ಸಮೀಪ ಬಂದಿದ್ದ ಸೋದರ ಸಂಬಂಧಿ ಕಳಲೆ ಕೇಶವಮೂರ್ತಿ ವಿರುದ್ಧ ನಿಮ್ಮನ್ನು ಗೆಲ್ಲಿಸಿದ ಧ್ರುವನಾರಾಯಣ್ ನಿಮ್ಮ ಗೌರವ ಕಾಪಾಡಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮಂತ್ರಿ ಮಾಡಲು ನೆರವಾಗಲಿಲ್ಲವೇ...?

- ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...?

- ಮಾಗಿದ ವಯಸ್ಸಲ್ಲಿ ಬೆಳೆಯುತ್ತಿರುವ ದಲಿತ ರಾಜಕಾರಣಿಗಳಿಗೆ ಆದರ್ಶ ಆಗುವುದು ಬಿಟ್ಟು ದ್ವೇಷದ ಜ್ವಾಲೆಗೆ ಕಿಡಿ ಹೊತ್ತಿಸುವ ನಿಮ್ಮ ಈ ನಡೆಯಿಂದ ಮತದಾರರು ಏನನ್ನು ನಿರೀಕ್ಷಿಸಲು ಸಾಧ್ಯವಿದೆ ತಿಳಿಸುವಿರಾ....?7. 45 ವರ್ಷ ಸುದೀರ್ಘ ಮೀಸಲಾತಿ ಕ್ಷೇತ್ರದಲ್ಲಿ ದಲಿತ ರಾಜಕಾರಣಿಯಾಗಿ ಅಧಿಕಾರ ಅನುಭವಿಸಿರುವ ನೀವು ಎರಡನೇ ತಲೆಮಾರಿನ ಒಬ್ಬ ದಲಿತ ನಾಯಕನನ್ನು ಹುಟ್ಟು ಹಾಕಿ ಬೆಳೆಸಿದ ನಿದರ್ಶನವಿದ್ದರೆ ಬಹಿರಂಗ ಪಡಿಸುವಿರಾ....?

- ಚುನಾವಣಾ ಪ್ರಚಾರದಲ್ಲಿ ಬೈಯುವುದನ್ನೇ ಚಾಳಿ ಮಾಡಿಕೊಂಡಿರುವ ನೀವು ಪ್ರಜಾಪ್ರಭುತ್ವ ಆಶಯ, ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದೀನಿ ಅಂತ ಭಾವಿಸಿದ್ದೀರಾ...?

ಡಿಜಿಟಲ್​ ವಾರ್​​

ಹೀಗೆ 13 ಪ್ರಶ್ನೆಗಳನ್ನ ಮಾಡಿತ್ತು. ಈ ಪ್ರಶ್ನೆಗಳಿಗೂ ಇತಿಹಾಸದಲ್ಲಿ ನಡೆದುಹೋದ ರಾಜಕೀಯ ಚಟುವಟಿಕೆಯ ಬಗ್ಗೆ ಸಾಕ್ಷಾಧಾರಗಳೊಂದಿಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಕೇಳಿದ್ದ ಪ್ರತಿಯೊಂದು ಪ್ರಶ್ನೆಗೂ ಸವಿವರವಾದ ಉತ್ತರ ನೀಡುವುದರ ಮುಖಾಂತರ ಕಾಂಗ್ರೆಸ್​ನ ಧೃವನಾರಾಯಣ್​ರ ಸಾಧಕ ಭಾದಕಗಳನ್ನು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ನೀಡಿದ ಕೆಲ ಉತ್ತರಗಳ ತುಣುಕುಗಳು ಹೀಗಿವೆ

ಡಿಜಿಟಲ್​ ವಾರ್​​

..!


ABOUT THE AUTHOR

...view details