ಚಾಮರಾಜನಗರ:ವರುಣನ ಆರ್ಭಟಕ್ಕೆ ಮನೆ ಗೋಡೆ ಕುಸಿದು ಬಾಲಕ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ದೇಶಿಗೌಡನಪುರದಲ್ಲಿ ನಡೆದಿದೆ.
ಚಾಮರಾಜನಗರದಲ್ಲಿ ಮನೆ ಗೋಡೆ ಕುಸಿದು ಬಾಲಕ ಸಾವು.. ತಂದೆ-ತಾಯಿ ಸ್ಥಿತಿ ಗಂಭೀರ
ಚಾಮರಾಜನಗರ ತಾಲೂಕಿನ ದೇಶಿಗೌಡನಪುರದಲ್ಲಿ ಮಳೆಯ ಆರ್ಭಟಕ್ಕೆ ಗೋಡೆ ಕುಸಿದು ಬಾಲಕ ಹಾಗೂ ಪೋಷಕರ ಮೇಲೆ ಬಿದ್ದಿದೆ. ಇದರಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಪೋಷಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ನಿವಾಸಿ ಬಾಲಕ ವೀರಭದ್ರಸ್ವಾಮಿ(4) ಮೃತ ದುರ್ದೈವಿ. ತಂದೆ ಮಲ್ಲೇಶ್ ಹಾಗೂ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತ ಬೆಳಗಿನ ಜಾವ ಸಂಭವಿಸಿದ್ದು, ಮಲಗಿದ್ದ ವೇಳೆ ಮನೆ ಗೋಡೆ ಕುಸಿದಿದೆ ಎಂದು ತಿಳಿದು ಬಂದಿದೆ.
ಮಣ್ಣಿನ ಗೋಡೆಯಾಗಿದ್ದರಿಂದ ರಾತ್ರಿ ಸುರಿದ ಮಳೆಗೆ ಗೋಡೆಯ ಒಂದು ಪಾರ್ಶ್ವ ಕುಸಿದು. ಬಾಲಕ ಹಾಗೂ ಪೋಷಕರ ಮೇಲೆ ಬಿದ್ದಿದೆ. ಉಸಿರುಗಟ್ಟಿ ಮಗು ಮೃತಪಟ್ಟಿದ್ದು, ತಂದೆ-ತಾಯಿ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ತಹಶೀಲ್ದಾರ್ ಮತ್ತು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.