ಕರ್ನಾಟಕ

karnataka

ETV Bharat / state

ಪುಂಡಾನೆ ಕಂಡ್ರೆ ಕಾಲ್​​ ಮಾಡಿ: ಬಂಡೀಪುರ ಸಿಎಫ್ಒ ಬಾಲಚಂದ್ರ ಮನವಿ - Elephant

ತಮಿಳುನಾಡಿನ ಪುಂಡಾನೆ ಚಾಮರಾಜನಗರದಲ್ಲಿ ಆತಂಕ ಸೃಷ್ಟಿಸಿದ್ದು, ಪುಂಡ ಗಜರಾಜನಿಗಾಗಿ ಹುಡುಕಾಟ ತೀವ್ರಗೊಂಡಿದೆ. ಸ್ಥಳೀಯರಿಗೆ ಆನೆ ಕಂಡುಬಂದಲ್ಲಿ ತಕ್ಷಣವೇ ಕಾಲ್​ ಮಾಡಿ ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಮನವಿ ಮಾಡಿದ್ದಾರೆ.

ತಮಿಳುನಾಡಿನ ಪುಂಡಾನೆಯಿಂದ ಚಾಮರಾಜನಗರದಲ್ಲಿ ಆತಂಕ ಸೃಷ್ಟಿ

By

Published : Oct 23, 2019, 9:20 PM IST

ಚಾಮರಾಜನಗರ: ತಮಿಳುನಾಡಿನ ಪುಂಡಾನೆ ಆತಂಕ ಸೃಷ್ಟಿಸಿದೆ. ಆನೆ ಸೆರೆಗೆ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಸಕಲ ಪ್ರಯತ್ನ ನಡೆಸುತ್ತಿದೆ.

ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ಆನೆ ಹೆಜ್ಜೆ ಗುರುತಿನ ಆಧಾರದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಆನೆ ಇರುವ ಸ್ಥಳ ಪತ್ತೆಯಾಗದಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ತಮಿಳುನಾಡಿನ ಪುಂಡಾನೆಯಿಂದ ಚಾಮರಾಜನಗರದಲ್ಲಿ ಆತಂಕ ಸೃಷ್ಟಿ

ಕರೆ ಮಾಡಿ: ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಈಗಾಗಲೇ ಹೆಜ್ಜೆ ಗುರುತನ್ನು ಹಿಡಿದು ಹಂಗಳಕೆರೆಯಿಂದ ದ್ಯಾಪಪುರದವರೆಗೂ ಬಂದಿದ್ದು, ಸಾರ್ವಜನಿಕರಿಗೆ ಒಂದು ವೇಳೆ ಆನೆ ಕಂಡರೆ ಅರಣ್ಯ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಮನವಿ ಮಾಡಿಕೊಂಡಿದ್ದಾರೆ.

ಬಂಡೀಪುರ ಸಿಎಫ್ಒ- 9448074519, ಜಿಎಸ್ ಬೆಟ್ಟ ಆರ್​ಎಫ್ಒ- 9740005943, ಮದ್ದೂರು ಆರ್​ಎಫ್ಒ- 9663973748, ಮೂಳೆಹೊಳೆ ಆರ್​ಎಫ್ಒ- 7406382193 ಈ ನಂಬರ್​​ಗಳಿಗೆ ಕರೆ ಮಾಡಿ ತಿಳಿಸಿ. ಈ ಎಲ್ಲಾ ಅಧಿಕಾರಿಗಳು ಆನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details