ಕರ್ನಾಟಕ

karnataka

ETV Bharat / state

ಪಟಾಕಿಗೆ ದುಡ್ಡು ಕೊಟ್ಟರೆ, ಗಿಡ ಖರೀದಿ ಮಾಡ್ತಾರಂತೆ ಈ ಶಾಲೆಯ ಚಿಣ್ಣರು! - ಪರಿಸರ ಕಾಳಜಿ

ದೀಪಾವಳಿಗೆ 15-20 ದಿನ ಬಾಕಿ ಇರುವಾಗಲೇ ಮಕ್ಕಳಿಂದ ಪ್ರತಿಜ್ಞೆ ಪಡೆಯುವ ಶಾಲಾ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಪಟಾಕಿ ಬದಲಿಗೆ ಮಣ್ಣಿನ ಹಣತೆಗಳನ್ನು ಹಚ್ಚಿ ಎಂದು ಪ್ರೇರೇಪಿಸುತ್ತಾರೆ.

ಹೊಂಗಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು

By

Published : Jun 5, 2019, 5:35 PM IST

ಚಾಮರಾಜನಗರ:ದೀಪಾವಳಿ ಬಂತೆಂದರೆ ಪಟಾಕಿಗಾಗಿ ವರಾತ, ಅದರಲ್ಲೂ ಹೆಚ್ಚು ಶಬ್ಧ ಬರುವ ನಾನಾ ಸಿಡಿಮದ್ದು ಬಾಂಬ್ ಕೊಳ್ಳಲು ಮಕ್ಕಳು ಒತ್ತಡ ಹಾಕುವುದು ಸಾಮಾನ್ಯ. ಆದರೆ, ಈ ಶಾಲೆಯ ಮಕ್ಕಳು ಎಲ್ಲರಂತಲ್ಲ, ಬದಲಾಗಿ ಈ ಮಕ್ಕಳು ಪರಿಸರ ಕಾಳಜಿಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಟಾಕಿಗೆ ನೋ ಎಂದು ಎರಡು ವರ್ಷಗಳಾಗಿದ್ದು, ಪಟಾಕಿ ಬದಲಿಗೆ ದೀಪ ಹಚ್ಚುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾಗಿರುವ ಮಹದೇಶ್ವರಸ್ವಾಮಿ ಶಾಲೆಗೆ ಬಂದಾಗಿನಿಂದ ಈ ಪರಿವರ್ತನೆಯಾಗಿದೆ.

ಹೊಂಗಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು

ದೀಪಾವಳಿ 15-20 ದಿನ ಇರುವಾಗಲೇ ಮಕ್ಕಳಿಂದ ಪ್ರತಿಜ್ಞೆ ಪಡೆಯುವ ಮಹದೇಶ್ವರಸ್ವಾಮಿ ಪಟಾಕಿ ಬದಲಿಗೆ ಮಣ್ಣಿನ ಹಣತೆಗಳನ್ನು ಹಚ್ಚಿ ಎಂದು ಪ್ರೇರೆಪಿಸುತ್ತಾರೆ. 1ನೇ ತರಗತಿ ಮಕ್ಕಳಲ್ಲೂ ಈ ಬದಲಾವಣೆ ಕಾಣಬಹುದಾಗಿದೆ. ಶಾಲೆಯ ಶೇ.99 ರಷ್ಟು ಮಕ್ಕಳು ಪಟಾಕಿ ಹೊಡೆಯುವುದಿಲ್ಲ. ಮಾಲಿನ್ಯಗಳ ಬಗ್ಗೆ ಅವರಿಗೆ ಅರಿವಾಗಿದೆ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕ ಮಹದೇಶ್ಚರಸ್ವಾಮಿ.

ಮಕ್ಕಳಿಗೆ ಪಟಾಕಿ ಹೊಡೆಯಲು ಪಾಲಕರು ಹಣ ನೀಡಿದರೆ ಆ ಹಣದಲ್ಲಿ ಗಿಡಗಳನ್ನು ತರುತ್ತಾರಂತೆ ಈ ಚಿಣ್ಣರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಣ್ಣರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ.

ABOUT THE AUTHOR

...view details