ಕರ್ನಾಟಕ

karnataka

ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷೆ ಸಿದ್ಧತೆಯಲ್ಲಿರುವ ಮಕ್ಕಳಿಗೆ ತೊಂದರೆ ಆಗದಂತೆ ಕ್ರಮ : ಶಿಕ್ಷಣ ಸಚಿವ ಸುರೇಶ್‌ಕುಮಾರ್‌

ಶಾಲೆಗೆ ರಜೆ ನೀಡಿದ್ದರೂ ಶಿಕ್ಷಕರಿಗೆ ರಜೆ ನೀಡದ ಕುರಿತು ಪ್ರತಿಕ್ರಿಯಿಸಿ, ಆಯಾ ಜಿಲ್ಲೆಯ ಡಿಡಿಪಿಐಗಳ ಗೈಡ್‌ಲೈನ್ಸ್ ಪ್ರಕಾರ ಕ್ರಮಕೈಗೊಳ್ಳುತ್ತಾರೆ ಎಂದಷ್ಟೇ ಹೇಳಿ ಸುದ್ದಿಗೋಷ್ಠಿಯಿಂದ ಹೊರ ನಡೆದರು‌..

suresh kumar
ಸುರೇಶ್ ಕುಮಾರ್

By

Published : Apr 21, 2021, 5:49 PM IST

ಚಾಮರಾಜನಗರ :ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಇನ್ನೂ ಎರಡು ತಿಂಗಳಿದೆ. ಮಕ್ಕಳ ಯೋಗಕ್ಷೇಮಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ‌ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವರು ಎಸ್ಎಸ್ಎಲ್​ಸಿ ಪರೀಕ್ಷೆ ಮಕ್ಕಳಿಗೆ ಪ್ರಮುಖ ಘಟ್ಟವಾಗಿದ್ದು, ಪರೀಕ್ಷೆ ನಡೆಸಬೇಕೆಂದು ಹೇಳುತ್ತಿದ್ದಾರೆ.‌ ಅಲ್ಲದೆ ಪರೀಕ್ಷೆ ಜೂನ್ 21ಕ್ಕೆ ನಿಗದಿಯಾಗಿದೆ. ಇನ್ನೂ ಎರಡು ತಿಂಗಳ ಅವಧಿ ಇದೆ. ಆವರೆಗೆ ಪರಿಸ್ಥಿತಿ ಅವಲೋಕನ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ..

ಮಕ್ಕಳು ಸಹ ಪರೀಕ್ಷೆಗಾಗಿ ಉತ್ತಮ ಸಿದ್ಧತೆ ನಡೆಸಿಕೊಂಡಿದ್ದಾರೆ. ಹೀಗಿರುವಾಗ, ಪರೀಕ್ಷೆಯ ಬಗ್ಗೆ ಪದೇಪದೆ ಅನವಶ್ಯಕವಾಗಿ ಮಾತನಾಡಿ ಮಕ್ಕಳನ್ನು ಗೊಂದಲಕ್ಕೀಡು ಮಾಡುವುದು ಬೇಡ. ಒಟ್ಟಾರೆ ಮಕ್ಕಳ ಯೋಗಕ್ಷೇಮಕ್ಕೆ ತೊಂದರೆಯಾಗದಂತೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಶಾಲೆಗೆ ರಜೆ ನೀಡಿದ್ದರೂ ಶಿಕ್ಷಕರಿಗೆ ರಜೆ ನೀಡದ ಕುರಿತು ಪ್ರತಿಕ್ರಿಯಿಸಿ, ಆಯಾ ಜಿಲ್ಲೆಯ ಡಿಡಿಪಿಐಗಳ ಗೈಡ್‌ಲೈನ್ಸ್ ಪ್ರಕಾರ ಕ್ರಮಕೈಗೊಳ್ಳುತ್ತಾರೆ ಎಂದಷ್ಟೇ ಹೇಳಿ ಸುದ್ದಿಗೋಷ್ಠಿಯಿಂದ ಹೊರ ನಡೆದರು‌.

ಓದಿ:ರೀ ಡಿಸಿ, ಎಸ್ಪಿ ನೀವೇನ್ ಮಾಡ್ತಿದ್ದೀರಿ, ಏನಾದ್ರೂ ಹೆಚ್ಚು ಕಡಿಮೆಯಾದ್ರೇ.. ಸಚಿವ ಬೈರತಿ ಆಕ್ರೋಶ

ABOUT THE AUTHOR

...view details