ಚಾಮರಾಜನಗರ:ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ದಿನದಲ್ಲಿ 30ಕ್ಕೂ ಹೆಚ್ಚು ಕುರಿಗಳು ಹಾಗೂ ಎರಡು ಎಮ್ಮೆ ಕಳುವಾಗಿವೆ. ಇದು ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಬೆಚ್ಚಿ ಬೀಳಿಸಿದೆ.
3 ದಿನದಲ್ಲಿ 30 ಕುರಿ, 2 ಎಮ್ಮೆ ಕದ್ದ ಖದೀಮರು... ಗಡಿ ಜಿಲ್ಲೆಯಲ್ಲಿ ಹೆಚ್ಚಿದ ಕಳ್ಳರ ಹಾವಳಿ - ಸಂತೇಮರಹಳ್ಳಿ ಠಾಣಾ ವ್ಯಾಪ್ತಿ
ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆ ಕುರಿ ಹಾಗೂ ಎಮ್ಮೆ ಕಳ್ಳರ ಹಾವಳಿ ಹೆಚ್ಚಾಗಿದೆ. ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 3 ದಿನದಲ್ಲಿ 30ಕ್ಕೂ ಹೆಚ್ಚು ಕುರಿಗಳು ಹಾಗೂ ಎರಡು ಎಮ್ಮೆ ಕಳುವಾಗಿವೆ.
ಹಗಲಲ್ಲಿ ಸ್ಕೆಚ್,ರಾತ್ರಿ ಕುರಿಗಳೊಂದಿಗೆ ಎಸ್ಕೇಪ್..ಚಾಮರಾಜನಗರದಲ್ಲೆ ಹೆಚ್ಚಾಗ್ತಿದೆ ಕುರಿಗಳ್ಳರ ಕಾಟ
ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯ ಮಹಾದೇವಯ್ಯ ಎಂಬುವವರ ದೊಡ್ಡಿಯಲ್ಲಿ 9 ಆಡುಮರಿ, ಪುಟ್ಟಮಾದಯ್ಯ ಎಂಬುವವರ ಮನೆಯಲ್ಲಿ12 ಕುರಿಗಳು ಒಂದೇ ರಾತ್ರಿ ಕಳುವಾಗಿವೆ. ಬುಧವಾರ ರಾತ್ರಿ ಕಿನಕಹಳ್ಳಿ ಮತ್ತು ಕಟ್ಟಣವಾಡಿಯಲ್ಲಿ 2 ಎಮ್ಮೆಗಳು,11 ಕುರಿಗಳು ಕಳುವಾಗಿದ್ದವು.
ಕಳೆದ ವರ್ಷ ಚಾಮರಾಜನಗರ ಸುತ್ತಮುತ್ತ ಕುರಿಗಳ್ಳರ ಹಾವಳಿ ಮಿತಿಮೀರಿತ್ತು. ಬಳಿಕ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ನಂತರ ಕಳ್ಳತನ ಹತೋಟಿಗೆ ಬಂದಿತ್ತು. ಆದರೆ ಮತ್ತೆ ಈ ಭಾಗದಲ್ಲಿ ಕುರಿಗಳ್ಳರ ಹಾವಳಿ ಹೆಚ್ಚಾಗಿದೆ.