ಕರ್ನಾಟಕ

karnataka

ಪ್ರಶ್ನೆಯನ್ನೇ ಉತ್ತರಪತ್ರಿಕೆಯಲ್ಲಿ ಬರೆದು ಪಾಸಾದ್ರಂತೆ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ !

By

Published : Sep 14, 2019, 8:28 PM IST

ಹಿಂದಿ ಪಾಸಾಗಲು ಕೇವಲ 13 ಅಂಕ ನಿಗದಿಪಡಿಸಿದ್ದರು. ನನಗೆ ಆ 13 ಅಂಕವನ್ನು ಹೇಗೆ ಪಡೆಯಬೇಕೆಂದು ಯೋಚನೆಯಾಗಿತ್ತು ಎಂದು ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಎನ್.ಮಹೇಶ್

ಚಾಮರಾಜನಗರ:ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್, ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಭಾಷೆ ಕಲಿಕೆಯ ಬಗ್ಗೆ ಸ್ವ-ಅನುಭವವನ್ನು ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದಾರೆ.

ಎನ್.ಮಹೇಶ್, ಬಿಎಸ್​ಪಿ ಉಚ್ಛಾಟಿತ ಶಾಸಕ

ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಹಿಂದಿ ಭಾಷಾ ಶಿಕ್ಷಕರ ಕೊರತೆ ನಿವಾರಣೆ ಇನ್ನೂ ಸಾಧ್ಯವಾಗಿಲ್ಲ. ನಾನು ಓದುವಾಗಲು ವಿದ್ಯಾರ್ಥಿಗಳಿಗೆ ಹಿಂದಿ ಕಬ್ಬಿಣದ ಕಡಲೆಯಾಗಿತ್ತು. ಹಿಂದಿ ಕಲಿಕೆಯೇ ಪ್ರಾಥಮಿಕ ಶಾಲೆಗಳಲ್ಲಿ ಆಗುತ್ತಿಲ್ಲ ಎಂದರು.

ಹಿಂದಿ ಪಾಸಾಗಲು ಕೇವಲ 13 ಅಂಕ ನಿಗದಿಪಡಿಸಿದ್ದರು. ನನಗೆ ಆ 13 ಅಂಕವನ್ನ ಹೇಗೆ ಪಡೆಯಬೇಕೆಂದು ಯೋಚನೆಯಾಗಿತ್ತು. ಹಿಂದಿಯಲ್ಲಿ ಏನೇ ಬರೆದರೂ ಪಾಸ್​ ಮಾಡುತ್ತೀವಿ ಎಂದು ಶಿಕ್ಷಕರು ಹೇಳುತ್ತಿದ್ದರು. ತುಂಬಾ ಮಂದಿ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನೇ ಉಲ್ಟಾ ಬರೆದು ಪಾಸಾಗಿದ್ದಾರೆ. ಹಿಂದಿ ರಾಷ್ಟ್ರ ಭಾಷೆಯಾದರೂ ಸಹ ದಕ್ಷಿಣ ಭಾರತದವರು ಹಿಂದಿ ಅಷ್ಟು ಸುಲಭವಾಗಿ ಕಲಿಯಲಾಗಲಿಲ್ಲ ಎಂದರು.

ಅಕ್ಕರೆಯಿಂದ ಹಿಂದಿ ಹೇಳಿಕೊಡಬೇಕೆಂಬ ಸುರೇಶ್ ಕುಮಾರ್ ಅವರ ಮಾತಿಗೆ ನನ್ನ ಸಹಮತವಿದೆ. ಅದೇ ರೀತಿ,150 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗೆ ಹಿಂದಿ ಶಿಕ್ಷಕರನ್ನು ನೇಮಿಸಬೇಕು, ಜಿಲ್ಲೆಗೊಬ್ಬರಾದರೂ ವಿಷಯ ಪರಿವೀಕ್ಷಕರ ನೇಮಕಮಾಡಬೇಕು ಎಂದು ಸಚಿವಗೆ ಮನವಿ ಮಾಡಿದರು.

ಅಲ್ಲದೆ ಈ ಕಾರ್ಯಕ್ರಮ ಸರ್ವಪಕ್ಷ ಸಮಾಗಮಕ್ಕೆ ಕಾರಣವಾಯಿತು. ಬಿಜೆಪಿಯ ಸಚಿವ ಸುರೇಶ್ ಕುಮಾರ್, ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ, ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್, ಜೆಡಿಎಸ್ ನ ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ಭಾಗಿಯಾಗುವ ಮೂಲಕ ಸರ್ವ ಪಕ್ಷ ಸಮಾಗಮಕ್ಕೆ ಕಾರಣರಾದರು.

ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕರಾದ ಮರಿತಿಬ್ಬೇಗೌಡ ಮತ್ತು ಕೆ.ಟಿ.ಶ್ರೀಕಂಠೇಗೌಡ 2019ರ ಸಾಲಿನ ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ. ಶಿಕ್ಷಕರ ಕ್ಷೇತ್ರವಾದ್ದರಿಂದ ಇಬ್ಬರೂ ಭಾಗಿಯಾಗಿ ಗಮನ ಸೆಳೆದರು.

ABOUT THE AUTHOR

...view details