ಚಾಮರಾಜನಗರ: ವಿದ್ಯುತ್ ತಂತಿ ತಗುಲಿ 5.5 ಎಕರೆಗೂ ಹೆಚ್ಚು ಫಸಲು ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಜಿನ ಸಂತೇಮರಹಳ್ಳಿ ಸಮೀಪದ ಚಂಗಡಿಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗ್ರಾಮದ ಮಲ್ಲು, ಕುಮಾರ್ ಹಾಗೂ ಮಾದೇಗೌಡ ಎಂಬ ಮೂವರು ರೈತರ ಜಮೀನುಗಳಿಗೆ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬಾಳೆ ಹಾಗೂ ಕಬ್ಬು ಬೆಂಕಿಗಾಹುತಿಯಾಗಿದ್ದು ಚೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ರೈತರು ಆಕ್ರೋಶ ಹೊರಹಾಕಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ವಿದ್ಯುತ್ ತಂತಿ ತಗುಲಿ 5.5 ಎಕರೆ ಫಸಲು ನಾಶ: ನೊಂದ ರೈತನಿಂದ ಬೆಂಕಿಗೆ ಬೀಳಲು ಯತ್ನ..! - ವಿದ್ಯುತ್ ತಂತಿ ತಗುಲಿ 5.5 ಎಕರೆ ಫಸಲು ನಾಶ
ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮಲ್ಲು ಎಂಬ ರೈತ ಧಗಧಗಿಸುತ್ತಿದ್ದ ಬೆಂಕಿಗೆ ಬೀಳಲು ಯತ್ನಿಸಿದ್ದು ಸ್ಥಳದಲ್ಲಿದ್ದ ಸಂತೇಮರಹಳ್ಳಿ ಪಿಎಸ್ಐ ತಾಜುದ್ದಿನ್ ಮತ್ತು ಸಿಬ್ಬಂದಿ ರೈತನನ್ನು ಸಂತೈಸಿ, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ವಿದ್ಯುತ್ ತಂತಿ ತಗುಲಿ 5.5 ಎಕರೆ ಫಸಲು ನಾಶ