ಚಾಮರಾಜನಗರ:ಹೆಣ್ಣಾನೆಯೊಂದು ಅಸ್ವಾಭಾವಿಕವಾಗಿ ಸಾವನ್ನಪ್ಪಿರುವ ಘಟನೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯ ಬೂದಿಪಡಗದಲ್ಲಿ ನಡೆದಿದೆ.
ಹೆಣ್ಣಾನೆ ಸಾವು
ಸತ್ತಿರುವ ಹೆಣ್ಣಾನೆಯು 35 ವರ್ಷ ವಯೋಮಾನದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಆನೆ ಸತ್ತು 2 ದಿನಗಳಾಗಿದೆ ಎಂದು ತಿಳಿದುಬಂದಿದೆ. ಬೇಕಾದಷ್ಟು ನೀರು ಸೇವಿಸದಿದ್ದರಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ. ಅರಣ್ಯ ಪ್ರದೇಶದಲ್ಲಿಯೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಯನ್ನು ಸುಡಲಾಗಿದೆ.