ಕರ್ನಾಟಕ

karnataka

ETV Bharat / state

ಮಾದಪ್ಪನ ಬೆಟ್ಟಕ್ಕೆ ಶೀಘ್ರವೇ "ಸೋಲಾರ್ ಪವರ್"... ತಿಂಗಳಿಗೆ 10 ಲಕ್ಷ ರೂ. ಉಳಿತಾಯದ ವಿಶ್ವಾಸ

ಮಲೆ ಮಹದೇಶ್ವರ​ ಬೆಟ್ಟದ ಹೆಲಿಪ್ಯಾಡ್ ಬಳಿಯ ನಾಲ್ಕು ಎಕರೆ ಜಾಗದಲ್ಲಿ ಸೌರ ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆ. ಇದಕ್ಕಾಗಿ ಚೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಸೂಕ್ತವಾಗಿರುವ ಬಗ್ಗೆ ವರದಿ ನೀಡಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಸೌರ ವಿದ್ಯುತ್ ಸ್ಥಾವರ ನಿರ್ಮಾಣ
ಮಲೆ ಮಹದೇಶ್ವರ ಬೆಟ್ಟದಲ್ಲಿ ಸೌರ ವಿದ್ಯುತ್ ಸ್ಥಾವರ ನಿರ್ಮಾಣ

By

Published : Jun 27, 2021, 10:27 AM IST

ಚಾಮರಾಜನಗರ:ಉಡುಪಿಯ ಶ್ರೀಕೃಷ್ಣ ಮಠ ಸೋಲಾರಮಯವಾದ ಬೆನ್ನಲ್ಲೇ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 1 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಪ್ರಾಧಿಕಾರ ಮುಂದಾಗಿದೆ.

ಈ ಕುರಿತು ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದು, ಬೆಟ್ಟದ ಹೆಲಿಪ್ಯಾಡ್ ಬಳಿಯ ನಾಲ್ಕು ಎಕರೆ ಜಾಗದಲ್ಲಿ ಈ ಸೌರ ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದ್ದು, ಚೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಬಳಿಕ ಇದು ಸೂಕ್ತವಾಗಿರುವ ಬಗ್ಗೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.

ಇದರ ಯೋಜನಾ ವೆಚ್ಚ 8.51 ಕೋಟಿ ರೂ. ಎಂದು ಅಂದಾಜಿಸಿದ್ದು, ಎಂಎಸ್ಐಎಲ್ ಗೆ ಇದರ ಗುತ್ತಿಗೆ ಹಾಗೂ ನಿರ್ವಹಣಾ ಜವಾಬ್ದಾರಿ ನೀಡಲಾಗಿದೆ‌. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ‌ ಎಂದು ಅವರು ಮಾಹಿತಿ ನೀಡಿದ್ದಾರೆ.

ಸೌರಶಕ್ತಿ ಬಳಕೆಯಿಂದ ಪ್ರತಿ ತಿಂಗಳಿಗೆ ವಿದ್ಯುತ್ ಬಿಲ್ ನಲ್ಲಿ 10 ಲಕ್ಷ ರೂ. ಉಳಿತಾಯವಾಗಲಿದೆ. ಸ್ಥಾವರದ 5 ವರ್ಷದ ನಿರ್ವಹಣೆಯನ್ನು ಎಂಎಸ್ಐಎಲ್ ಮಾಡಲಿದ್ದು, 25 ವರ್ಷಗಳ ಕಾಲ ಸ್ಥಾವರ ಉತ್ತಮವಾಗಿ ಬಾಳಿಕೆ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details