ಕರ್ನಾಟಕ

karnataka

ETV Bharat / state

4 ತಿಂಗಳಿಂದ 15 ನಾಟಿ ಕೋಳಿ ತಿಂದು ತೇಗಿದ ಉರಗ ಸೆರೆ: ಕುಕ್ಕುಟೋದ್ಯಮಿ ನಿರಾಳ

ಹನೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಕಳೆದ ನಾಲ್ಕು ತಿಂಗಳಿಂದ 15 ಕೋಳಿ ಮರಿಗಳನ್ನು ಕದ್ದು ತಿಂದಿದ್ದ ಹಾವೊಂದನ್ನು ಉರಗಪ್ರೇಮಿ ಸ್ನೇಕ್ ಮಧು ನಿನ್ನೆ 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಡಿಗೆ ಬಿಟ್ಟು ಬಂದರು.

snake
snake

By

Published : Oct 11, 2021, 7:14 AM IST

ಚಾಮರಾಜನಗರ: ಒಂದಲ್ಲ, ಎರಡಲ್ಲ 15 ನಾಟಿ ಕೋಳಿ ಮರಿಗಳನ್ನು ಕದ್ದು ತಿಂದು, 3 ಕೋಳಿಗಳನ್ನು ಕೊಂದು ಹಾಕಿದ್ದ ಹಾವೊಂದನ್ನು ಹನೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಗ್ರಾಮದ ಅಬ್ದುಲ್ ಮುನೀರ್ ಎಂಬವರು ಕೋಳಿ ಸಾಕಾಣಿಕೆ ವೃತ್ತಿ ಮಾಡುತ್ತಿದ್ದಾರೆ. ಇವರ ಕುಕ್ಕುಟೋದ್ಯಮಕ್ಕೆ ಕೆರೆ ಹಾವೊಂದು ಕಳೆದ ನಾಲ್ಕು ತಿಂಗಳಿಂದ ಉಪಟಳ ನೀಡುತ್ತಿತ್ತು. ಈ ಹಾವು 15 ಕೋಳಿ ಮರಿಗಳನ್ನು ನುಂಗಿ ಹಾಕಿದ್ದಲ್ಲದೇ, 3 ಕೋಳಿಗಳನ್ನು ಕೊಂದುಹಾಕಿತ್ತು.

ಕೋಳಿ ಮರಿಗಳನ್ನು ಕದ್ದು ತಿಂದಿದ್ದ ಹಾವು ಸೆರೆ

ಈ ವಿಚಾರ ತಿಳಿದ ಅಜ್ಜೀಪುರದ ಉರಗಪ್ರೇಮಿ ಸ್ನೇಕ್ ಮಧು ನಿನ್ನೆ ಮೂರು ಗಂಟೆ ಕಾರ್ಯಾಚರಣೆ ನಡೆಸಿ ಹಾವು ಸೆರೆ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ. ಸದ್ಯಕ್ಕೆ ಕೋಳಿ ಮಾಲೀಕ ನಿಟ್ಟುಸಿರು ಬಿಟ್ಟಿದ್ದಾರೆ.

ABOUT THE AUTHOR

...view details