ಕೊಳ್ಳೇಗಾಲ: ಇಲ್ಲಿನ ಬಸ್ತಿಪುರ ಬಡಾವಣೆಯ ಕಬಿನಿ ನಾಲೆಯ ಬಳಿ ಸಮೀಪದಲ್ಲಿ ಆಮೆಯನ್ನು ಕೊಂದು ಮಾಂಸ ಸವಿಯುತ್ತಿದ್ದ 6 ಮಂದಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ್ದಾರೆ.
ಗುಂಡ್ಲುಪೇಟೆ ಸಮೀಪದ ಮಾಕ್ಕಳ್ಳಿ ಕಲೋನಿಯ ಸುರೇಶ್, ಶಿವಣ್ಣ, ಗಣೇಶ್, ಹರೀಶ್, ಕುಮಾರ್, ಶ್ರೀನಿವಾಸ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳು ಊರೂರು ತಿರುಗಿ ಶಾಸ್ತ್ರ ಹೇಳಿ ಬದುಕುತ್ತಿದ್ದವರಾಗಿದ್ದು, ಪಟ್ಟಣ ಸಮೀಪದ ಬಸ್ತಿಪುರ ಗ್ರಾಮದ ಕಬಿನಿ ನಾಲೆಯ ಸಮೀಪದಲ್ಲಿ ಮಂಗಳವಾರ ರಾತ್ರಿ ಆಮೆಯನ್ನು ಕೊಂದು ಮಾಂಸದಿಂದ ಅಡುಗೆ ತಯಾರಿಸುತ್ತಿದ್ದರು.