ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಬರೀ ಬೆಟ್ಟಗಳಿವೆ, ಶ್ರೀನಿವಾಸ್​​ಪ್ರಸಾದ್​​​​ ಸಾಧನೆಗಳಿಲ್ಲ: ಡಿಸಿಎಂ - ಜಿ.ಪರಮೇಶ್ವರ್

5 ಬಾರಿ ಸಂಸದರಾಗಿದ್ದ ವಿ.ಶ್ರೀನಿವಾಸ್​ಪ್ರಸಾದ್ ಅವರಿಗೆ ಈ ವಯಸ್ಸಿನಲ್ಲಿ ಸ್ಪರ್ಧೆ ಬೇಕಿರಲಿಲ್ಲ. ಚಾಮರಾಜನಗರದಲ್ಲಿ ಕೇವಲ ಬೆಟ್ಟಗಳಿವೆ, ಅವರ ಸಾಧನೆಯ ಸಾಕ್ಷಿ ಗುಡ್ಡಗಳಿಲ್ಲ ಎಂದು ಜಿ.ಪರಮೇಶ್ವರ್ ಟೀಕಿಸಿದರು.

ಜಿ.ಪರಮೇಶ್ವರ್

By

Published : Apr 13, 2019, 11:11 PM IST

ಚಾಮರಾಜನಗರ: ಲಿಂಗಾಯತ ಧರ್ಮ ವಿಚಾರ ಡಿಕೆಶಿ ಹಾಗೂ ಎಂ.ಬಿ.ಪಾಟೀಲ್ ವೈಯಕ್ತಿಕ ಅಭಿಪ್ರಾಯವಷ್ಟೆ. ರಾಜ್ಯದಲ್ಲಿ ಧರ್ಮ ಯುದ್ಧವಿಲ್ಲ ಎಂದು ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.

ಹನೂರಿನಲ್ಲಿ ರೋಡ್ ಶೋಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಪರಮೇಶ್ವರ್

ಹನೂರಿನಲ್ಲಿ ರೋಡ್ ಶೋಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳ ಪರ ಉತ್ತಮ ಒಲವಿದೆ. ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು‌.

5 ಬಾರಿ ಸಂಸದರಾಗಿದ್ದ ವಿ.ಶ್ರೀನಿವಾಸ್​ಪ್ರಸಾದ್ ಅವರಿಗೆ ಈ ವಯಸ್ಸಿನಲ್ಲಿ ಸ್ಪರ್ಧೆ ಬೇಕಿರಲಿಲ್ಲ. ಚಾಮರಾಜನಗರದಲ್ಲಿ ಕೇವಲ ಬೆಟ್ಟಗಳಿವೆ, ಅವರ ಸಾಧನೆಯ ಸಾಕ್ಷಿ ಗುಡ್ಡಗಳಿಲ್ಲ ಎಂದು ಟೀಕಿಸಿದರು.

ABOUT THE AUTHOR

...view details