ಕರ್ನಾಟಕ

karnataka

ETV Bharat / state

ಹನೂರಲ್ಲಿ ಸಿಡಿಲು ಬಡಿದು ಮನೆ ಕುಸಿತ: ಇಬ್ಬರಿಗೆ ಗಾಯ - Rain related incidents in Chamarajanagar

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಆರ್ಭಟ. ಸಿಡಿಲಿನ ಹೊಡೆತಕ್ಕೆ ಮನೆ ಕುಸಿತ, ಇಬ್ಬರಿಗೆ ಗಾಯ. ಹನೂರು ತಾಲೂಕಿನ ಹೊಸಪೋಡು ಗ್ರಾಮದಲ್ಲಿ ನಡೆದ ಘಟನೆ.

Rain related incidents in Chamarajanagar
ಹನೂರಲ್ಲಿ ಸಿಡಿಲಿಗೆ ಮನೆ ಕುಸಿತ

By

Published : Oct 17, 2022, 1:54 PM IST

ಚಾಮರಾಜನಗರ:ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಸಿಡಿಲಿನ ಹೊಡೆತಕ್ಕೆ ಮನೆ ಕುಸಿದು ಇಬ್ಬರು ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಹೊಸಪೋಡು ಗ್ರಾಮದಲ್ಲಿ ನಡೆದಿದೆ.

ಹೊಸಪೋಡು ಗ್ರಾಮದ ಸೋಲಿಗ ಸಮಾಜದ ಮಹದೇವ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮಹದೇವ್ ಮತ್ತು ಇನ್ನೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಮಹದೇವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಗ್ರಾಮಸ್ಥರು ಕರೆದೊಯ್ದಿದ್ದಾರೆ.

ಹನೂರಲ್ಲಿ ಸಿಡಿಲು ಬಡಿದು ಮನೆ ಕುಸಿತ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಗರಿಕೆಕಂಡಿಯಿಂದ ತಮಿಳುನಾಡಿನ ಹಂದಿಯೂರು ನಡುವೆ ವಿವಿಧ ಕಡೆ ಗುಡ್ಡ ಕುಸಿತವಾಗಿದೆ. ಗರಿಕೆಕಂಡಿ ಚೆಕ್ ಪೋಸ್ಟ್‌ನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ‌ ಭಾನುವಾರದಿಂದ ನಾಲ್ಕು ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇದನ್ನೂ ಓದಿ:ಚಾಮರಾಜನಗರದಲ್ಲಿ ಮಳೆಗೆ ಕೋಡಿಬಿದ್ದ ಕೆರೆಗಳು.. ಜಲ ದಿಗ್ಬಂಧನ, ಸಿಡಿಲು ಬಡಿದು ಮಹಿಳೆ ಕೈ ಕಾಲಿಗಿಲ್ಲ ಸ್ವಾಧೀನ

ABOUT THE AUTHOR

...view details