ಕರ್ನಾಟಕ

karnataka

ETV Bharat / state

ನನ್ನೂರಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್ ರಾಜ್​ಕುಮಾರ್​​​​ - ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಚಾಮರಾಜ ನಗರ ಜಿಲ್ಲಾಡಳಿತದಿಂದ ಕಾರ್ಯಕ್ರಮ

ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ. ನನ್ಮ ತಂದೆಯ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್​​, ನಮ್ಮ ರಾಜ್ಯ-ನಮ್ಮ ದೇಶ ಚೆನ್ನಾಗಿ ಬೆಳೆಯಬೇಕು..

Puneet Raj Kumar as Ambassador for Chamarajanagar Development
ನನ್ನೂರಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್ ರಾಜ್​ಕುಮಾರ್​​​​

By

Published : Nov 13, 2020, 5:48 PM IST

ಚಾಮರಾಜನಗರ : ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಜಿಲ್ಲಾಡಳಿತ ಸಿದ್ಧಪಡಿಸಿರುವ ನಾಲ್ಕು ನಿಮಿಷಗಳ ವಿಡಿಯೋವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಈ ವೇಳೆ ವರ್ಚ್ಯುಯಲ್ ಮೂಲಕ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತನಾಡಿ, ಚಾಮರಾಜನಗರದ ರಾಯಭಾರಿಯಾಗಲು ಹೆಮ್ಮೆಯಿಂದ ಒಪ್ಪಿಕೊಂಡಿದ್ದೇನೆ. ನನ್ಮ ತಂದೆಯ ಊರಾದ ಚಾಮರಾಜನಗರದ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್​​, ನಮ್ಮ ರಾಜ್ಯ-ನಮ್ಮ ದೇಶ ಚೆನ್ನಾಗಿ ಬೆಳೆಯಬೇಕು ಎಂದು ಆಶಿಸಿದರು.

ನನ್ನೂರಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್ ರಾಜ್​ಕುಮಾರ್​​..​​

ಚಾಮರಾಜನಗರದ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕನಾಗಿದ್ದೇನೆ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಜೋಡಿಸುತ್ತೇನೆ, ಜಿಲ್ಲೆಯ ಸೌಂದರ್ಯವನ್ನು ಹೊರಭಾಗದ ಜನರಿಗೆ ತಲುಪಿಸಿ ಒಮ್ಮೆಯಾದರೂ ಭೇಟಿಕೊಡಬೇಕು ಎಂದನಿಸುವಂತೆ ಮಾಡಬೇಕು.
ಚಿತ್ರೀಕರಣ ಇಲ್ಲದಿದ್ದರೇ ನೇರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ ಎಂದು ತಿಳಿಸಿ ಇದೇ ವೇಳೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಚಾಮರಾಜನಗರವನ್ನು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರ ತರಬೇಕು ಎಂದರು.

For All Latest Updates

TAGGED:

ABOUT THE AUTHOR

...view details