ಚಾಮರಾಜನಗರ:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಸರಣಿ ಪ್ರತಿಭಟನೆಗಳು ಮುಂದುವರೆಯುತ್ತಲೇ ಇವೆ.
ಡಿಕೆಶಿ ಬಂಧನ ಖಂಡಿಸಿ ಗಡಿ ಜಿಲ್ಲೆಯಲ್ಲಿ ನಿಲ್ಲದ ಪ್ರತಿಭಟನೆ
ಈಗಾಗಲೇ ಚಾಮರಾಜನಗರದಾದ್ಯಂತ ಡಿಕೆಶಿ ಬಂಧನ ಖಂಡಿಸಿ ಹಲವಾರು ಪ್ರತಿಭಟನೆ ನಡೆದಿದ್ದು, ಶುಕ್ರವಾರ ಕೂಡ ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇಂದು ಮಾಜಿ ಶಾಸಕ ಬಾಲರಾಜು ಯುವ ಕಾಂಗ್ರೆಸ್ ಕಾರ್ಯಕರ್ತರು ಯಳಂದೂರಿನಲ್ಲಿ 1 ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.
ಈಗಾಗಲೇ ಜಿಲ್ಲಾದ್ಯಂತ ಪ್ರತಿಭಟನೆ ನಡೆದಿದ್ದು, ಶುಕ್ರವಾರ ಕೂಡ ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇಂದು ಮಾಜಿ ಶಾಸಕ ಬಾಲರಾಜು ಯುವ ಕಾಂಗ್ರೆಸ್ ಕಾರ್ಯಕರ್ತರು ಯಳಂದೂರಿನಲ್ಲಿ 1 ತಾಸಿಗೂ ಹೆಚ್ಚು ಕಾಲ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.
ಪ್ರತಿಭಟನೆಯಲ್ಲಿ, ಕಾಂಗ್ರೆಸ್ ಪಕ್ಷವನ್ನು ಮುಗಿಸಬೇಕೆಂಬ ಹುನ್ನಾರ ನಡೆಸಿ ಬಿಜೆಪಿ ಡಿಕೆಶಿ ಅವರನ್ನು ಬಂಧಿಸಿದೆ. ನಮ್ಮ ಆಕ್ರೋಶ ಅವರು ಬಿಡುಗಡೆಯಾಗುವವರೆಗೂ ನಿಲ್ಲುವುದಿಲ್ಲವೆಂದು ಮಾಜಿ ಶಾಸಕ ಬಾಲರಾಜು ಹೇಳಿದರು. ಈ ವೇಳೆ ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ಮತ್ತು ಜಯಣ್ಣ ಮತ್ತಿತ್ತರರು ಇದ್ದರು.