ಚಾಮರಾಜನಗರ: ’RSS ನವರು ಭಾರತದ ನಿಜವಾದ ತಾಲಿಬಾನಿಗಳು' ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿಕೆ ಖಂಡಿಸಿ ನಗರದಲ್ಲಿಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಕ್ಷದ ಕಚೇರಿಯಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ 60ಕ್ಕೂ ಹೆಚ್ಚು ಕಾರ್ಯಕರ್ತರು, ರಾಷ್ಟ್ರೀಯ ಹೆದ್ದಾರಿಯಲ್ಲಿ 20 ನಿಮಿಷ ತಡೆದು ಧ್ರುವನಾರಾಯಣ ವಿರುದ್ಧ ಆಕ್ರೋಶ ಹೊರಹಾಕಿದರು.
ತಾವು ಯಾವುದೇ ಗಲಭೆಕೋರರ ಸಹೋದರರಲ್ಲ, ಇಟಲಿಯವರನ್ನು ಮೆಚ್ಚಿಸಲು ದೇಶಸೇವೆಗೆ ಸಮರ್ಪಿತವಾದ ಸಂಘಟನೆ ಬಗ್ಗೆ ಲಘುವಾಗಿ ಮಾತನಾಡಬೇಡಿ. ಸೋತು ಮನೆಯಲ್ಲಿರುವುದರಿಂದ ಪ್ರಚಾರಕ್ಕಾಗಿ ಈ ಹೇಳಿಕೆ ಕೊಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರಹಾಕಿದ್ರು.
ಮೈಸೂರಿನ ಮನೆಗೆ ಮುತ್ತಿಗೆ :
ಮೈಸೂರಿನ ಮನೆಗೆ ಮುತ್ತಿಗೆ ಹಾಕಲಿದ್ದು, ಚಾಮರಾಜನಗರಕ್ಕೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸಿ, ಧ್ರುವ ನಾರಾಯಣ್ ಅವರನ್ನು ಘೇರಾವ್ ಮಾಡುತ್ತೇವೆ. ಬಿಜೆಪಿ ವಿರುದ್ಧ ಬಾಯಿ ಚಪಲಕ್ಕಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ನಿರಂತರ ಹೋರಾಟ ನಡೆಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.‘