ಚಾಮರಾಜನಗರ: ಮತ ಎಣಿಕೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ ಎಸ್ಡಿಪಿಐ ಬಾವುಟದ ಚಿತ್ರಗಳನ್ನು ಸುಟ್ಟ ಘಟನೆ ನಡೆಯಿತು.
ಪಾಕ್ ಪರ ಘೋಷಣೆ: ಎಸ್ಡಿಪಿಐ ಬಾವುಟ ಸುಟ್ಟು ಚಾಮರಾಜನಗರದಲ್ಲಿ ಆಕ್ರೋಶ - ಚಾಮರಾಜನಗರ ಸುದ್ದಿ
ಪಾಕಿಸ್ತಾನದ ಪರ ಘೊಷಣೆ ಕೂಗಿದ Sdpi ಸದಸ್ಯರನ್ನು ಬಂಧಿಸಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರನ್ನು ವಜಾಗೊಳಿಸುವಂತೆ ಡಿಸಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಪಾಕ್ ಪರ ಘೋಷಣೆ: ಎಸ್ಡಿಪಿಐ ಬಾವುಟ ಸುಟ್ಟು ಚಾಮರಾಜನಗರದಲ್ಲಿ ಆಕ್ರೋಶ
ಚಾಮರಾಜೇಶ್ವರ ದೇಗುಲದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಭುವನೇಶ್ವರಿ ವೃತ್ತದಲ್ಲಿ ಎಸ್ಡಿಪಿಐ ಬಾವುಟದ ಚಿತ್ರಗಳಿಗೆ ಬೆಂಕಿ ಹಂಚಿ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಪಾಕಿಸ್ತಾನದ ಪರ ಘೊಷಣೆ ಕೂಗಿದ sdpi ಸದಸ್ಯರನ್ನು ಬಂಧಿಸಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರನ್ನು ವಜಾಗೊಳಿಸುವಂತೆ ಡಿಸಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.