ಚಾಮರಾಜನಗರ: ಹಾಲಿ ಸಂಸದ ಆರ್. ಧ್ರುವನಾರಾಯಣ್ ಹಾಗೂ ಮಾಜಿ ಸಂಸದ ಕಾಗಲವಾಡಿ ಪ್ರಚಾರ ನಡೆಸುವ ವೇಳೆ ಮೋದಿ ಪರ ಘೋಷಣೆ ಕೇಳಿ ಬಂದಿದೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರಿನಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ. ಅವರಿಗೇಕೆ ಮತ ಹಾಕುತ್ತೀರಿ ಎಂಬ ಕಾಗಲವಾಡಿ ಶಿವಣ್ಣ ಮಾತಿಗೆ ಕುಪಿತಗೊಂಡ ಗ್ರಾಮಸ್ಥರು ಸಂಸದ ಧ್ರುವನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.