ಕರ್ನಾಟಕ

karnataka

ETV Bharat / state

ಚಾಮರಾಜನಗರಕ್ಕೆ ರಾಷ್ಟ್ರಪತಿ: 20 ಕಿ.ಮೀ ಪ್ರಕೃತಿ ಸೊಬಗು ಸವಿಯಲಿದೆ ಪ್ರಥಮ ಪ್ರಜೆಯ ಕುಟುಂಬ - ಚಾಮರಾಜನಗರಕ್ಕೆ ಆಗಮಿಸಲಿರುವ ರಾಷ್ಟ್ರಪತಿ

ಇಂದು 11.40ಕ್ಕೆ ಬಿಳಿಗಿರಿರಂಗನ ಬೆಟ್ಟ ಸಮೀಪದ ವಡ್ಡಗೆರೆಯಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​​ನಲ್ಲಿ ಬಂದಿಳಿಯುವ ರಾಷ್ಟ್ರಪತಿ ಕುಟುಂಬ, ದೇಗುಲಕ್ಕೆ ರಸ್ತೆ‌ ಮಾರ್ಗವಾಗಿ ತೆರಳಲಿದೆ.

chamarajanagar
ಚಾಮರಾಜನಗರ

By

Published : Oct 7, 2021, 10:46 AM IST

ಚಾಮರಾಜನಗರ:ಜಿಲ್ಲೆಗೆರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ರಾಷ್ಟ್ರಪತಿ ಅಂಗರಕ್ಷಕರು, ಜಿಲ್ಲಾ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಇಂದು 11.40ಕ್ಕೆ ಬಿಳಿಗಿರಿರಂಗನ ಬೆಟ್ಟ ಸಮೀಪದ ವಡ್ಡಗೆರೆಯಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​​ನಲ್ಲಿ ಬಂದಿಳಿಯುವ ರಾಷ್ಟ್ರಪತಿ ಕುಟುಂಬ, ದೇಗುಲಕ್ಕೆ ರಸ್ತೆ‌ ಮಾರ್ಗವಾಗಿ ಸಂಚರಿಸಲಿದೆ. ಈ ವೇಳೆ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟದ 20 ಕಿ.ಮೀನಷ್ಟು ಕಾಡು ಹಾದಿಯ ಪ್ರಕೃತಿ ಸೌಂದರ್ಯವನ್ನು ಅವರು ಸವಿಯಲಿದ್ದಾರೆ.

ಬಿಳಿಗಿರಿ ರಂಗನಾಥ ದೇವಾಲಯಕ್ಕೆ ವಿಶೇಷ ಅಲಂಕಾರ

ಈಗಾಗಲೇ ರಾಷ್ಟ್ರಪತಿ ಆಗಮನಕ್ಕೆ ಜಿಲ್ಲಾಡಳಿತ ಸಕಲ ತಯಾರಿ ಮಾಡಿಕೊಂಡಿದ್ದು, ದೇಗುಲದಲ್ಲಿ ಪೂಜೆ ಮಾಡಲು ಓರ್ವ ಅರ್ಚಕರಿಗಷ್ಟೇ ಅವಕಾಶ ನೀಡಲಾಗಿದೆ. ದೇವಾಲಯ ಆವರಣವನ್ನು ಸಂಪೂರ್ಣ ಹೂವಿನಿಂದ ಸಿಂಗರಿಸವಾಗಿದೆ. ತಪ್ಪಲಿನಿಂದ ದೇಗುಲದವರೆಗೆ ಕಾರು ಸಂಚರಿಸಲು ಪಿಡಬ್ಲ್ಯೂಡಿ ತಾತ್ಕಾಲಿಕ ರ್ಯಾಂಪ್ ನಿರ್ಮಿಸಿದೆ.

ಬಿಳಿಗಿರಿರಂಗನ ಬೆಟ್ಟದಲ್ಲಿ ರಾಷ್ಟ್ರಪತಿ ಕುಟುಂಬ ಪೂಜೆ ಸಲ್ಲಿಸಿದ ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಭೋಜನ ಸವಿದು, ಮಧ್ಯಾಹ್ನ 3.30 ರಿಂದ 4.30 ರವರೆಗೆ ಚಾಮರಾಜನಗರ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾಡು ದಾರಿಯುದ್ದಕ್ಕೂ ಪೊಲೀಸರನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ:ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ

ABOUT THE AUTHOR

...view details