ಚಾಮರಾಜನಗರ (ಗುಂಡ್ಲುಪೇಟೆ): ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮೂರು ವಾರಗಳ ಕಾಲ ದೇಶವನ್ನೇ ಲಾಕ್ಡೌನ್ ಮಾಡಿದ್ದರೂ ಸಹ ಜನರು ದಿನಸಿ ತರಕಾರಿಗಳಿಗೆ ಹೊರಗೆ ಬರುತ್ತಲೇ ಇದ್ದಾರೆ.
ಕೊರೊನಾ ಭೀತಿ: ಜನ ಅಂತರ ಕಾಯ್ದುಕೊಳ್ಳಲು ಗುಂಡ್ಲುಪೇಟೆ ಪೊಲೀಸರಿಂದ ಈ ಉಪಾಯ! - ಕೊರೊನಾ ವಿರುದ್ಧ ಸಮರ
ದಿನಸಿ ಖರೀದಿಗೆ ಬರುವ ಜನರ ಮಧ್ಯೆ ಅಂತರ ಕಾಪಾಡಲು ಗುಂಡ್ಲುಪೇಟೆ ಪೊಲೀಸರು ಹೊಸ ಉಪಾಯವೊಂದನ್ನ ಮಾಡಿದ್ದಾರೆ.
ಗುಂಡ್ಲುಪೇಟೆ ಪೊಲೀಸರ ಹೊಸ ಪ್ಲ್ಯಾನ್
ಹಾಗಾಗಿ ಜನರು ಅಂತರವನ್ನು ಕಾಯ್ದುಕೊಳ್ಳುವಂತೆ ಮಾಡಲು ಪೊಲೀಸರು ದಿನಸಿ, ತರಕಾರಿ ಅಂಗಡಿಗಳ ಮುಂಭಾಗ ಎರಡು ಮೀಟರ್ ಅಂತರಕ್ಕೆ ಚೌಕಾಕಾರದ ಬಾಕ್ಸ್ಗಳನ್ನು ಮಾಡಿ, ಅದರಲ್ಲಿ ನಿಲ್ಲುವಂತೆ ತಿಳಿಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ.
ಸರದಿಯಲ್ಲಿ ಬಂದು ಅಂತರ ಕಾಯ್ದುಕೊಳ್ಳಲು ವ್ಯಾಪಾರಿಗಳು ಗ್ರಾಹಕರಿಗೆ ಸೂಚನೆ ನೀಡುತ್ತಿದ್ದಾರೆ. ಈ ರೀತಿಯಲ್ಲಿ ಅನುಸರಣೆ ಮಾಡದಿದ್ದರೆ ಅಂಗಡಿಗಳನ್ನು ಮುಚ್ಚುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.