ಚಾಮರಾಜನಗರ:ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದವನನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಬೇಡಗುಳಿ ಸಮೀಪದ ಮೊಣಕೈಪೋಡಿನಲ್ಲಿ ನಡೆದಿದೆ.
ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದವನ ಬಂಧನ: 6.5 ಕೆಜಿ ಗಾಂಜಾ ವಶ - Chamarajanagara crime latest news
ಮನೆ ಹಿತ್ತಲಿನಲ್ಲಿ ಅಕ್ತಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ್ದಾರೆ.
Chamarajanagara
ಗಿರಿಜನ ವ್ಯಕ್ತಿಯಾದ ಬಿ.ಮಹಾದೇವ(62) ಬಂಧಿತ ಆರೋಪಿ. ಈತ ಮನೆಯ ಹಿತ್ತಲಿನಲ್ಲಿರುವ ಕಾಫಿ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈ ಕುರಿತು ಖಚಿತ ಮಾಹಿತಿ ಪಡೆದ ಪುಣಜನೂರು ಆರ್ ಎಫ್ ಒ ಕಾಂತರಾಜು ನೇತೃತ್ವದ ತಂಡ ದಾಳಿ ನಡೆಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ, ಚಾಮರಾಜನಗರ ಪೂರ್ವ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತನಿಂದ 6.5 ಕೆಜಿಯ ಸುಮಾರು 17 ಗಾಂಜಾ ಗಿಡಗಳನ್ನು ವಶಪಡಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.