ಚಾಮರಾಜನಗರ: ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳನ್ನು ದಯವಿಟ್ಟು ಪಾಲಿಸಿ ಎಂದು ಒಮನ್ ನಿಂದ ಕನ್ನಡಿಗರೊಬ್ಬರು ನೀಡಿರುವ ಸಂದೇಶ ವೈರಲ್ ಆಗಿದೆ.
ಕೊಡಗಿನ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಸುರೇಶ್ ಎಂಬವವರು ಒಮನ್ ನಿಂದ ವಿಡಿಯೋ ಮೂಲಕ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ನಾನು ಇರುವ ಒಮನ್ ದೇಶದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಒಳ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದ ನಾನು ಇಲ್ಲಿ ಚೆನ್ನಾಗಿದ್ದೇನೆ. ಶಾಲಾ-ಕಾಲೇಜು, ಸೂಪರ್ ಮಾರ್ಕೆಟ್, ಮಾಲ್ಗಳನ್ನ ಬಂದ್ ಮಾಡಲಾಗಿದೆ. ವಿದೇಶದಿಂದ ಬಂದವರಿಗಾಗಿ ಮತ್ತು ಕೊರೊನಾ ಪೀಡಿತರಿಗೆ ವಿಶಾಲ ಜಾಗದಲ್ಲಿ ಪ್ರತ್ಯೇಕ ಶೆಡ್ ಗಳ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.