ಚಾಮರಾಜನಗರ: ಆಹಾರ ಅರಸಿ ಜೋಡಿ ಜಿಂಕೆಗಳು ಕಾಲೇಜಿನ ಆವರಣಕ್ಕೆ ಬಂದು ತಬ್ಬಿಬ್ಬಾಗಿ ಓಡಾಡಿ ಘಟನೆ ಹನೂರು ಸಮೀಪದ ಮಾರ್ಗರೇಟ್ ಕಾಲೇಜ್ ಬಳಿ ನಡೆದಿದೆ.
ಕಾಡಿನಿಂದ ಕಾಲೇಜಿಗೆ ಬಂದು ತಬ್ಬಿಬ್ಬಾದ ಜೋಡಿ ಜಿಂಕೆಗಳು...! - kannadanews
ಆಹಾರ ಅರಸಿ ಕಾಲೇಜು ಆವರಣಕ್ಕೆ ಬಂದ ಜಿಂಕೆಗಳು. ಜನರನ್ನ ಕಂಡು ತಬ್ಬಿಬ್ಬಾದ ಜಿಂಕೆಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು.
ಜನರನ್ನು ಕಂಡ ಕೂಡಲೇ ಭಯದಿಂದ ಗಲಿಬಿಲಿಗೊಂಡ ಜಿಂಕೆಗಳು ಅತ್ತಿಂದಿತ್ತ-ಇತ್ತಿಂದತ್ತ ಓಡಾಡಿ, ಹಿಡಿಯಲು ಬಂದವರನ್ನು ಕಂಡು ಓಡಿದ ಪ್ರಸಂಗವೂ ನಡೆಯಿತು. ಓಡಾಡುತ್ತಿದ್ದ ಜಿಂಕೆಗಳನ್ನು ಕಂಡ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೊನೆಗೂ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
ನೀರಡಿಕೆ, ಹಸಿರು ಮೇವಿನ ಕೊರತೆಯಿಂದಾಗಿ ಜಿಂಕೆಗಳು ಆಹಾರ ಅರಸಿ ನಾಡಿನತ್ತ ಬರುತ್ತಿರುವ ಘಟನೆ ಆಗಾಗ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಸ್ಥಳೀಯರು ಮಾನವೀಯತೆ ಪ್ರದರ್ಶಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.