ಕರ್ನಾಟಕ

karnataka

ETV Bharat / state

ಆಕ್ಸಿಜನ್ ದುರಂತದ ಬೆನ್ನಲ್ಲೇ ಬೆಡ್ ಕೊರತೆ... ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬಗೆಹರಿಯದ ಸಮಸ್ಯೆ - ಆಕ್ಸಿಜನ್ ದುರಂತ

24 ಜನರು ಪ್ರಾಣ ಕಳೆದುಕೊಂಡರೂ ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಸುಧಾರಿಸಿಲ್ಲ. ಆಕ್ಸಿಜನ್ ಸಮಸ್ಯೆಗೆ ಸದ್ಯ ತಾತ್ಕಾಲಿಕ ಪರಿಹಾರ ದೊರೆತಿದೆ. ಆದರೆ, ಈಗ ಹೊಸದೊಂದು ಸಮಸ್ಯೆ ತಲೆದೋರಿದ್ದು, ಮತ್ತೆ ರೋಗಿಗಳು ಆಸ್ಪತ್ರೆ ಮುಂದೆ ಪರದಾಡುವಂತಾಗಿದೆ.

oxygen Bed Shortage in Chamarajnagar Covid Hospital
ಆಕ್ಸಿಜನ್ ದುರಂತದ ಬೆನ್ನಲ್ಲೆ ಬೆಡ್ ಕೊರತೆ

By

Published : May 6, 2021, 8:59 AM IST

ಚಾಮರಾಜನಗರ:ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತರು ಪ್ರಾಣ ಬಿಟ್ಟ ಬಳಿಕ ಜಿಲ್ಲಾಸ್ಪತ್ರೆಯ ಆಕ್ಸಿಜನ್ ಸಮಸ್ಯೆ ಬಗೆಹರಿದಿದ್ದು, ಇದೀಗ ಆಕ್ಸಿಜನ್ ಬೆಡ್​ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 50 ಐಸಿಯು, 75 ಆಕ್ಸಿಜನೇಟೆಡ್, 43 ಜನರಲ್ ಸೇರಿದಂತೆ ಎಲ್ಲಾ 168 ಬೆಡ್​ಗಳು ಭರ್ತಿಯಾಗಿವೆ. ಇದರಿಂದ ತೀವ್ರ ತರಹದ ರೋಗ ಲಕ್ಷಣವುಳ್ಳ ಆಕ್ಸಿಜನ್ ಅಗತ್ಯ ಇರುವ ರೋಗಿಗಳಿಗೆ ಬೆಡ್ ದೊರೆಯುವುದು ಅನುಮಾನವಾಗಿದೆ. ಒಂದು ದುರಂತ ಕಣ್ಣ ಮುಂದೆ ಇದ್ದರೂ ಇನ್ನೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಸೋಂಕಿತರನ್ನು ಇತರ ಕೋವಿಡ್ ಕೇರ್ ಸೆಂಟರ್​ಗಳಿಗೆ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕರ್ನಾಟಕ ಮುಕ್ತ ವಿವಿ ಅಧ್ಯಯನ ಕೇಂದ್ರ ಹಾಗೂ ಮಾದಾಪುರ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್​ನಲ್ಲಿ 85 ಬೆಡ್​ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಆದರೆ, ಅಲ್ಲಿಗೆ ಸೋಂಕಿತರನ್ನು ಶಿಫ್ಟ್​ ಮಾಡುವ ಕಾರ್ಯ ಆಗಿಲ್ಲ. ಸದ್ಯ, ಈ ಕೇಂದ್ರಗಳಲ್ಲಿ ಕೇವಲ ನಾಲ್ಕು ಮಂದಿ ಸೋಂಕಿತರು ಮಾತ್ರ ಇದ್ದಾರೆ. ಉಳಿದಂತೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರಿನಲ್ಲಿರುವ ಕೋವಿಡ್​ ಕೇರ್ ಸೆಂಟರ್​ಗಳಿಗೆ ಇದುವರೆಗೆ ಯಾವ ಸೋಂಕಿತರನ್ನು ದಾಖಲು ಮಾಡಿಲ್ಲ.

ಓದಿ : ಚಾಮರಾಜನಗರ ಆಕ್ಸಿಜನ್ ದುರಂತ.. ಬೇಸರಗೊಂಡು ರಾಜೀನಾಮೆಗೆ ಮುಂದಾಗಿದ್ದರೇ ಸಚಿವ ಸುರೇಶ್ ಕುಮಾರ್..!!?

ಪ್ರತಿದಿನ ಪತ್ತೆಯಾಗುವ ಹೊಸ ಸೋಂಕಿತರನ್ನು ಈ ಕೇರ್ ಸೆಂಟರ್​ಗಳಿಗೆ ದಾಖಲಿಸದೆ ಹೋಂ ಐಸೋಲೇಷನ್​ಗೆ ಕಳುಹಿಸಲಾಗುತ್ತಿದೆ. ಹೋಂ ಐಸೋಲೇಷನ್​​ನಲ್ಲಿರುವವರು ಉಸಿರಾಟದ ಸಮಸ್ಯೆಯಿಂದ ಬಳಲಿ ಜಿಲ್ಲಾಸ್ಪತ್ರೆಗೆ ಬಂದರೆ, ಇಲ್ಲಿ ಬೆಡ್ ಸಿಗುತ್ತಿಲ್ಲ. ಬುಧವಾರ ರಾತ್ರಿ ಓರ್ವ ಯುವಕ ಹಾಗೂ ಗುರುವಾರ ಬೆಳಗ್ಗೆ ಓರ್ವ ವ್ಯಕ್ತಿ ಸೇರಿ ಇಬ್ಬರು ಬೆಡ್ ಸಿಗದೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 10 ಮಂದಿ ಸೋಂಕಿತರು ಆಕ್ಸಿಜನ್ ಬೆಡ್ ಸಿಗದೆ ಅಸುನೀಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ABOUT THE AUTHOR

...view details