ಕರ್ನಾಟಕ

karnataka

ETV Bharat / state

ಬಂಡೀಪುರ ಅವಳಿ ಆನೆ ಮರಿಗಳ ಚಿನ್ನಾಟದ ಹಿಂದಿದೆ ರಕ್ಷಣಾ ಕಾರ್ಯ.. ಇದು ಆಪರೇಷನ್ ಟ್ವಿನ್ಸ್ ಸ್ಟೋರಿ - Operation Twins Story in Bandipur

ಕೆಲವು ದಿನಗಳ ಹಿಂದೆ ಬಂಡೀಪುರದಲ್ಲಿ ಕಾಡಾನೆಯೊಂದು ಅವಳಿ ಆನೆ ಮರಿಗಳಿಗೆ ಜನ್ಮ ನೀಡಿತ್ತು. ಈ ಆನೆಯು ಅಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಮರಿಗಳಿಗೆ ಜನ್ಮ ನೀಡಿತ್ತು. ಈ ನೀರಿನ ಹೊಂಡದಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದ ಆನೆ ಮರಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

operation-twins-story-behind-twin-elephants-in-bandipur
ಬಂಡೀಪುರದ ಅವಳಿ ಆನೆ ಮರಿಗಳ ಹಿಂದಿದೆ ಆಪರೇಷನ್ ಟ್ವಿನ್ಸ್ ಸ್ಟೋರಿ

By

Published : Apr 21, 2022, 12:43 PM IST

ಚಾಮರಾಜನಗರ: ಕೆಲವು ದಿನಗಳ ಹಿಂದೆ ಬಂಡೀಪುರದಲ್ಲಿ ಕಾಡಾನೆಯೊಂದು ಅವಳಿ ಆನೆ ಮರಿಗಳಿಗೆ ಜನ್ಮ ನೀಡಿತ್ತು. ಈ ಆನೆಯು ಅಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಮರಿಗಳಿಗೆ ಜನ್ಮ ನೀಡಿತ್ತು. ಈ ನೀರಿನ ಹೊಂಡದಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದ ಆನೆ ಮರಿಗಳನ್ನು ಅರಣ್ಯ ಇಲಾಖೆಯ ಇಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಆಪರೇಷನ್ ಟ್ವಿನ್ಸ್ : ಕಳೆದ ಏ. 17 ರಂದು ಬಂಡೀಪುರ ಹಳೇ ಸಫಾರಿ ಕೇಂದ್ರದಿಂದ 200 ಮೀಟರ್ ದೂರದ ಮೂರ್ಕೆರೆ ಎಂಬಲ್ಲಿ ಒಂದು ಸಫಾರಿ ವಾಹನದ ಚಾಲಕ ಕಾಡಾನೆಯೊಂದು ಅವಳಿ ಆನೆ ಮರಿಗಳಿಗೆ ಜನ್ಮ ನೀಡಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಚಾರ ಅರಿತ ಅಧಿಕಾರಿಗಳು ಮಧ್ಯಾಹ್ನದ ಹೊತ್ತಿಗೆ ಸ್ಥಳಕ್ಕೆ ತೆರಳಿದಾಗ ಕಾಡಾನೆಯೊಂದು ನೀರಿನ ಹೊಂಡದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ್ದು ಕಂಡುಬಂದಿದೆ. ಆದರೆ, ಆನೆ ಮರಿಗಳ ಕುತ್ತಿಗೆಯವರೆಗೆ ನೀರು ಇದ್ದುದ್ದರಿಂದ ಅವುಗಳು ನೀರಿನಿಂದ ಮೇಲಕ್ಕೆ ಬರಲು ಕಷ್ಟಪಡುತ್ತಿದ್ದವು.‌

ಬಂಡೀಪುರದ ಅವಳಿ ಆನೆ ಮರಿಗಳು

ಇವೆಲ್ಲವನ್ನೂ ಬಂಡೀಪುರದ ಅಧಿಕಾರಿಗಳು ಗಮನಿಸಿ ಕಾಯುತ್ತ ಕುಳಿತಿದ್ದರೂ, ಆನೆ ಮರಿಗಳು ಹೊಂಡದಿಂದ ಮೇಲಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ "ಆಪರೇಷನ್ ಟ್ವಿನ್ಸ್" ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಎರಡು ತಂಡವನ್ನು ರಚಿಸಿ, ಒಂದು ತಂಡ ತಾಯಿ ಆನೆಯನ್ನು ದೂರಕ್ಕೆ ಓಡಿಸುವ ಕಾರ್ಯವನ್ನು, ಮತ್ತೊಂದು ತಂಡ ಅವಳಿ ಆನೆ ಮರಿಗಳನ್ನು ಹೊಂಡದಿಂದ ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ್ದಾರೆ. ಬಳಿಕ ತಾಯಿ ಆನೆ ಬಂದು ಎರಡೂ ಮರಿಗಳನ್ನು ಕಾಡಿಗೆ ಕರೆದೊಯ್ದಿದೆ.

ಮರಿಗಳ ರಕ್ಷಣೆ : ಕುತ್ತಿಗೆ ತನಕ ನೀರಿದ್ದರಿಂದ ಅವಳಿ ಮರಿಗಳು ನೀರಿನೊಳಗೆ ಮುಳುಗಿ ಅಸುನೀಗುವ ಆತಂಕವೂ ಇತ್ತು. ಅದಲ್ಲದೆ, ಆನೆ ಮರಿಗಳು ನೀರಿನಿಂದ ಮೇಲೆ ಬರಲು ತಮ್ಮೆಲ್ಲ ಶಕ್ತಿಯನ್ನು ವ್ಯಯಿಸುತ್ತಿದ್ದರಿಂದ, ಶಕ್ತಿಯನ್ನು ಕಳೆದುಕೊಂಡ ಬಳಲಿಕೆಯಿಂದ ಮೃತಪಡುವ ಸಾಧ್ಯತೆ ಇದ್ದುದರಿಂದ ಈ ರಕ್ಷಣಾ ಕಾರ್ಯ ನಡೆಸಿದೆವು ಎಂದು ಸಿಎಫ್ಒ ರಮೇಶ್ ಕುಮಾರ್ ಹೇಳಿದ್ದಾರೆ. ಈ ರಕ್ಷಣಾ ಕಾರ್ಯ ಅಧಿಕಾರಿಗಳಿಗೆ, ಸಿಬ್ಬಂದಿಗೆ ಒಳ್ಳೆಯ ಅನುಭವ ಮತ್ತು ಸಂತಸ ಕೊಟ್ಟಿದೆ. ಈ ಹಿಂದೆ 1994 ರಲ್ಲಿ, ನಮ್ಮ ಸಿಬ್ಬಂದಿ ಅವಳಿ ಮರಿಗಳೊಟ್ಟಿಗೆ ಆನೆಯನ್ನು ನೋಡಿದ್ದರು ಎಂಬ ಬಗ್ಗೆ ಅವರು 'ಈಟಿವಿ ಭಾರತ'ಕ್ಕೆ ಮಾಹಿತಿ ತಿಳಿಸಿದ್ದಾರೆ.

ಓದಿ :24/7 ಹೋಟೆಲ್ ಓಪನ್ ಮಾಡಲು ಅನುಮತಿ ಕೊಡ್ತಾರಾ ಪೊಲೀಸರು?

ABOUT THE AUTHOR

...view details