ಕರ್ನಾಟಕ

karnataka

ETV Bharat / state

ಸರಹದ್ದು ದಾಟಿ ಬಂದ ಹುಲಿರಾಯನಿಗೆ ಹುಡುಕಾಟ: ಕಾರ್ಯಾಚರಣೆಗೆ ಗಜಪಡೆ ಸಾಥ್

ಬಂಡೀಪುರ ಹುಲಿ ಸಂರಕ್ಷಿತ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಚೌಡಹಳ್ಳಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹರಸಹಾಸ ಪಡುತ್ತಿದೆ.

By

Published : Feb 14, 2019, 7:08 PM IST

ಚಾಮರಾಜನಗರ

ಚಾಮರಾಜನಗರ:ಬಂಡೀಪುರ ಹುಲಿ ಸಂರಕ್ಷಿತ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪ್ತಿಯ ಚೌಡಹಳ್ಳಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗಿಳಿದಿದೆ.

ಚಾಮರಾಜನಗರ

ಬುಧವಾರ ಸಂಜೆಯಷ್ಟೆ ಬಾಳೆತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಇದುವರೆಗೂ ಹುಲಿ ಕಂಡಿಲ್ಲ. ಹೀಗಾಗಿ ಹುಲಿ ಸೆರೆಗೆ ತೋಟದ ಬಳಿಯ ಕೆರೆ ಸಮೀಪ ಮೇಕೆ ಕಟ್ಟಿ ಎರಡು ಬೋನುಗಳನ್ನು ಇರಿಸಲಾಗಿದೆ. ಬಂಡೀಪುರದ ಜಯಪ್ರಕಾಶ್, ನಾಗರಹೊಳೆಯ ಕೃಷ್ಣ, ಭೀಮ ಹಾಗೂ ಗೋಪಾಲಸ್ವಾಮಿ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಗೋಪಾಲಸ್ವಾಮಿಬೆಟ್ಟ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ABOUT THE AUTHOR

...view details