ಕರ್ನಾಟಕ

karnataka

ETV Bharat / state

ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ; ತಮಗೇ ಮಗು ಕೊಡಿ ಎಂದು ಹಲವರ ದುಂಬಾಲು - ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

ಬಸ್​ಸ್ಟ್ಯಾಂಡ್​ನಲ್ಲಿ ಪತ್ತೆಯಾದ 7 ದಿನದ ಗಂಡು ಮಗುವನ್ನು ಸಾಕಲು ನಾಲ್ಕೈದು ಮಂದಿ ಮುಂದೆ ಬಂದಿದ್ದು, ತಮಗೇ ಆ ಮಗುವನ್ನು ಕೊಡುವಂತೆ ಪೊಲೀಸರಿಗೆ ದಂಬಾಲು ಬಿದ್ದಿದ್ದಾರೆ..

newborn-baby-found-at-bus-stop
ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

By

Published : Apr 25, 2022, 11:24 AM IST

ಚಾಮರಾಜನಗರ :ಬಸ್ ನಿಲ್ದಾಣದಲ್ಲಿ ನವಜಾತ ಶಿಶುವೊಂದನ್ನು ಬ್ಯಾಗ್​ನಲ್ಲಿಟ್ಟು ಪಾಲಕರು ನಾಪತ್ತೆಯಾಗಿರುವ ಘಟನೆ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದಿದೆ. ಬ್ಯಾಗ್​ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದು, ಬ್ಯಾಗ್ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಬ್ಯಾಗ್ ತೆರೆದು ನೋಡಿದಾಗ 7 ದಿನದ ಗಂಡು ಮಗು ಇರುವುದು ಪತ್ತೆಯಾಗಿದೆ.

ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

ಹನೂರು ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿ ಬ್ಯಾಗ್ ಸಮೇತ ಮಗುವನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಇನ್ನು, ಈ ಮುದ್ದಾದ ಮಗುವನ್ನು ಸಾಕಲು ನಾಲ್ಕೈದು ಮಂದಿ ಮುಂದೆ ಬಂದಿದ್ದು, ತಮಗೇ ಶಿಶುವನ್ನು ಕೊಡಬೇಕೆಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ‌. ಅನೈತಿಕ ಸಂಬಂಧದಿಂದ‌ ಮಗು ಜನಿಸಿದ್ದರಿಂದ ಮರ್ಯಾದೆಗೆ ಅಂಜಿ ಮಗುವನ್ನು ತೊರೆದಿರಬೇಕು ಎನ್ನಲಾಗುತ್ತಿದೆ.

ಇದನ್ನೂ ಓದಿ:ಮಂಗಳೂರು : ಸ್ಕೂಟರ್‌ಗೆ ಹಿಂಬದಿಯಿಂದ‌ ಲಾರಿ ಡಿಕ್ಕಿ, ಸವಾರ ಸಾವು

ABOUT THE AUTHOR

...view details