ಕರ್ನಾಟಕ

karnataka

ETV Bharat / state

ಚಾಮರಾಜನಗರ ಎಸ್​ಪಿ ದಿವ್ಯಾ ಸಾರಾ ಥಾಮಸ್ ಎತ್ತಂಗಡಿ.. ಜಿ ಸಂಗೀತಾ ನೂತನ ಜಿಲ್ಲಾ ಪೊಲೀಸ್ ವರಿಷ್ಠೆ.. - ಎಸ್​ಪಿ ಸಂಗೀತಾ ಜಿ

ಹಿಂದಿನ ಎಸ್ಪಿಯಾಗಿದ್ದ ಹೆಚ್‌ ಡಿ‌‌‌‌‌ ಆನಂದ್ ಕುಮಾರ್ ಅವರೇ ಮತ್ತೆ ಚಾಮರಾಜನಗರ ಎಸ್ಪಿಯಾಗ್ತಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೆ, ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ‌..

new-sp-appointed-to-chamarajnagar
ಚಾಮರಾಜನಗರ ಎಸ್​ಪಿ ವರ್ಗಾವಣೆ: ದಿವ್ಯಾ ಸಾರಾ ಥಾಮಸ್ ಸ್ಥಾನಕ್ಕೆ ಸಂಗೀತಾ ನೇಮಕ

By

Published : Jul 14, 2021, 8:28 PM IST

ಚಾಮರಾಜನಗರ :ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರನ್ನು ವರ್ಗಾವಣೆ ಮಾಡಿ ಸಂಗೀತಾ.ಜಿ ಅವರನ್ನು ಚಾಮರಾಜನಗರ ನೂತನ ಎಸ್ಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಜೂನ್‌ 8ಕ್ಕೆ ದಿವ್ಯಾ ಸಾರಾ ಥಾಮಸ್ ಅವರು ಚಾಮರಾಜನಗರ ಎಸ್ಪಿಯಾಗಿ ಒಂದು ವರ್ಷ ಪೂರ್ಣವಾಗಿದ್ದಪ ಹಿನ್ನೆಲೆಯಲ್ಲಿ 2014ರ ಬ್ಯಾಚ್​​​ನ ಅಧಿಕಾರಿಯಾಗಿರುವ ಜಿ‌.ಸಂಗೀತಾ ಅವರನ್ನು ಆ ಸ್ಥಾನಕ್ಕೆ ನಿಯುಕ್ತಗೊಳಿಸಿ, ಅಧಿಕಾರವಹಿಸಿಕೊಳ್ಳುವಂತೆ ಸೂಚಿಸಲಾಗಿದೆ‌‌.

ಆದೇಶ ಪ್ರತಿ

ಇದನ್ನೂ ಓದಿ:ನಾಸಾದಲ್ಲಿ ತರಬೇತಿ ವೇಳೆ ಭಾರತೀಯ ಯುವತಿಯ ದೈವಭಕ್ತಿ: ಈ ಫೋಟೋಗೆ ಪರ-ವಿರೋಧ ಪ್ರತಿಕ್ರಿಯೆ

ಹಿಂದಿನ ಎಸ್ಪಿಯಾಗಿದ್ದ ಹೆಚ್‌ ಡಿ‌‌‌‌‌ ಆನಂದ್ ಕುಮಾರ್ ಅವರೇ ಮತ್ತೆ ಚಾಮರಾಜನಗರ ಎಸ್ಪಿಯಾಗ್ತಾರೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬಂದಿತ್ತು. ಆದರೆ, ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ‌.

ABOUT THE AUTHOR

...view details