ಚಾಮರಾಜನಗರ:ಸಿನಿಮಾಹಿರೋಗಳಿಗೆ ಆ ಊರಲ್ಲಿ ಒಂದು ನಾಲ್ಕೈದು ಜನ ಫ್ಯಾನ್ಸ್, ಈ ಊರಲ್ಲಿ ಐದಾರು ಜನ ಫ್ಯಾನ್ಸ್ ಇರೋದು, ನೋಡಿರ್ತಿವಿ. ಆದ್ರೆ ಇಲ್ಲೊಂದು ಊರಲ್ಲಿ ಪ್ರತಿ ಮನೆಯಲ್ಲಿ ಪುನೀತ್ ರಾಜ್‍ಕುಮಾರ್, ಶಿವಣ್ಣನ ಭಾವಚಿತ್ರ ವಿದೆ. ಅಷ್ಟೇ ಅಲ್ಲ ಟಿವಿಯಲ್ಲಿ ಅಣ್ಣಾವ್ರು ಇಲ್ಲವೇ ಅಪ್ಪು-ಶಿವಣ್ಣ ಚಿತ್ರ ಬಂತೆಂದರೆ ಸಾಕು ಕೆಲಸ-ಕಾರ್ಯ ಬಿಟ್ಟು ಎಲ್ಲರೂ ಟಿವಿ ಮುಂದೆ ಕುಳಿತು ಸಿನಿಮಾ ನೋಡ್ತಾರೆ.
ಹೌದು, ತಾಲೂಕಿನ ನಲ್ಲೂರು ಮೋಳೆ ಎಂಬ ಊರಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಗಳಿದ್ದಾರೆ. ಇಲ್ಲಿ ಬಹುಪಾಲು ಯುವಕರ ಕೈ ಮತ್ತು ಎದೆಯಲ್ಲಿ ಪವರ್ ಸ್ಟಾರ್, ಅಪ್ಪು, ಪುನೀತ್, ಅಣ್ಣಾವ್ರು, ಅಣ್ಣಾಬಾಂಡ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮೊಬೈಲ್ನಲ್ಲೂ ಅಪ್ಪುದೇ ರಿಂಗ್ ಟೋನ್, ಫೋನ್ ಕೇಸಲ್ಲೂ ಪುನೀತ್ ಭಾವಚಿತ್ರ ರಾರಾಜಿಸುತ್ತದೆ. ಒಟ್ಟಿನಲ್ಲಿ ನಲ್ಲೂರು ಮೊಳೆ ಹೋಗಿ ಅಪ್ಪು ಊರಾಗಿದೆ ಅಂದ್ರೆ ತಪ್ಪಿಲ್ಲ.