ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ ಅಗತ್ಯ ಆಕ್ಸಿಜನ್​ ವ್ಯವಸ್ಥೆ ಮಾಡಲಾಗಿದೆ : ಸಂಸದ ಪ್ರತಾಪ್ ಸಿಂಹ - Mysore Corona News

ಮೈಸೂರಿನಲ್ಲೂ ಕಳೆದ 2 ದಿನಗಳ ಹಿಂದೆ ಇಂತಹದ್ದೇ ಪರಿಸ್ಥಿತಿ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಸಮಯ ಪ್ರಜ್ಞೆಯಿಂದ ಸಿಲಿಂಡರ್ ವ್ಯವಸ್ಥೆಯಾಗಿದ್ದು, ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ..

Mysore
ಸಂಸದ ಪ್ರತಾಪ್ ಸಿಂಹ

By

Published : May 3, 2021, 11:33 AM IST

Updated : May 3, 2021, 11:47 AM IST

ಮೈಸೂರು :ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದಿರುವ ಸಾವಿನ ಪ್ರಕರಣದ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಅಗತ್ಯ ಆಕ್ಸಿಜನ್ ವ್ಯವಸ್ಥೆಯನ್ನು ಈಗ ಮಾಡಲಾಗಿದೆ ಎಂದು ಹೇಳಿದ್ದಾರೆ‌.

ಕಳೆದ ರಾತ್ರಿ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಉಂಟಾಗಿರುವ ಘಟನೆ ಬಗ್ಗೆ ವಿಷಾದವಿದೆ. ವಿಷಯ ತಿಳಿದು ರಾತ್ರಿಯೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. 200ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಲಾಗಿದೆ ಎಂದರು.

ಸಂಸದ ಪ್ರತಾಪ್ ಸಿಂಹ

ಮೈಸೂರಿನಲ್ಲೂ ಕಳೆದ 2 ದಿನಗಳ ಹಿಂದೆ ಇಂತಹದ್ದೇ ಪರಿಸ್ಥಿತಿ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರ ಸಮಯ ಪ್ರಜ್ಞೆಯಿಂದ ಸಿಲಿಂಡರ್ ವ್ಯವಸ್ಥೆಯಾಗಿದ್ದು, ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ. ಇನ್ನೂ ಹೆಚ್ಚಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಂಸದರು ತಿಳಿಸಿದರು.

Last Updated : May 3, 2021, 11:47 AM IST

ABOUT THE AUTHOR

...view details