ಚಾಮರಾಜನಗರ: ಯಾವುದೇ ಪೂರ್ವಾನುಮತಿ ಪಡೆಯದೆ 10ಕ್ಕೂ ಹೆಚ್ಚು ತೇಗದ ಮರಗಳನ್ನು ಕಟಾವು ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮಹಳ್ಳಿ ಗ್ರಾಮದ ಹಿಡುವಳಿ ಜಮೀನೊಂದರಲ್ಲಿ ಅನುಮತಿ ಪಡೆಯದೆ ತೇಗದ ಮರಗಳನ್ನು ಕತ್ತರಿಸಿದ ವಿಚಾರ ತಿಳಿದು ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಲೋಕೇಶ್ ಮಾರ್ಗದರ್ಶನದಲ್ಲಿ ಪರಶಿವಪ್ಪ ಮತ್ತಿತರೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಕಟ್ ಮಾಡಿದ ಮರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಚಾಮರಾಜನಗರದಲ್ಲಿ ಆರ್ಎಫ್ಒ ಕಚೇರಿಗೆ ಬೀಗ: ಅನುಮತಿ ಪಡೆಯದೆ 10ಕ್ಕೂ ಹೆಚ್ಚು ತೇಗದ ಮರ ಕಟಾವು
ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗು ಪರಿಹಾರ ವಿತರಣೆ ಮಾಡಿಲ್ಲವೆಂದು ಆರೋಪಿಸಿ ರೈತರು ಕೆ.ಗುಡಿ ಆರ್ ಎಫ್ಒ ಕಚೇರಿಯ ಗೇಟಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಗೇಟಿಗೆ ಬೀಗ: ಚಾಮರಾಜನಗರ ತಾಲೂಕಿನ ಹೊಂಡರಬಾಳು, ನಾಗವಳ್ಳಿ, ನಲ್ಲೂರು, ಜ್ಯೋತಿಗೌಡನಪುರ ಗ್ರಾಮಗಳ ರೈತರ ಜಮೀನುಗಳಿಗೆ ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶ ಮಾಡಿದರೂ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟಿಲ್ಲ, ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿ ಸ್ಥಳೀಯರು ನಲ್ಲೂರಿನಲ್ಲಿರುವ ಕೆ.ಗುಡಿ ಆರ್ ಎಫ್ಒ ಕಚೇರಿಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಹೊಂಡರಬಾಳು ಎಲ್ಲೆಯಲ್ಲಿ ಬರುವ ಜಮೀನುಗಳಿಗೆ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಕ್ರಮಕೈಗೊಂಡಿಲ್ಲ. ಆನೆ ದಾಳಿಯಿಂದ ಬೆಳೆನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಿಸದಿದ್ದರೆ ಡಿಎಫ್‌ಒ, ಎಸಿಎಫ್, ಸಿಸಿಎಫ್ ಕಚೇರಿಗೆ ಮುತ್ತಿಗೆ ಹಾಕುತ್ತೇವೆಂದು ರೈತರು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ಪ್ರತ್ಯಕ್ಷ.. ಗ್ರಾಮಸ್ಥರನ್ನ ಅಟ್ಟಾಡಿಸಿಕೊಂಡು ಹೋದ ಗಜರಾಜ!