ಕರ್ನಾಟಕ

karnataka

ETV Bharat / state

ಸರ್ಕಾರ ರೈತರಿಗೆ ಪೂರಕ ಕಾಯ್ದೆಗಳನ್ನ ತಂದು, ಅವರ ಹಿತ ಕಾಯಬೇಕು-ಶಾಸಕ‌ ಆರ್ ನರೇಂದ್ರ - republic day celebration 2021

ಜೈ ಜವಾನ್ -ಜೈ ಕಿಸಾನ್ ಎಂದು ಘೋಷಣೆ ಹೇಳುತ್ತೇವೆ. ಸೈನಿಕರು ದೇಶವನ್ನು ರಕ್ಷಿಸಿದ್ರೆ, ರೈತರು ಅನ್ನ ನೀಡಿ ಬದುಕಿಸುತ್ತಾರೆ. ಅಂತವರು ಅಮೂಲ್ಯವಾದ 72ನೇ ಗಣರಾಜ್ಯೋತ್ಸವ ದಿನದಂದು ರಸ್ತೆಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವುದು ದುರಂತವೇ ಸರಿ‌..

Breaking News

By

Published : Jan 26, 2021, 2:41 PM IST

ಕೊಳ್ಳೇಗಾಲ :ದೇಶದ ಬೆನ್ನಲುಬಾದ ರೈತರು ಗಣರಾಜ್ಯೋತ್ಸವ ದಿನದಂದು ರಸ್ತೆಗಿಳಿದು ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿರುವುದು ಈ ದೇಶದ ದುರಂತ ಎಂದು ಶಾಸಕ ನರೇಂದ್ರ ಹೇಳಿದ್ರು.

ಕೊಳ್ಳೇಗಾಲ ಆರ್‌. ನರೇಂದ್ರ ರೈತರ ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ಹೀಗಂತಾರೆ..
ಪಟ್ಟಣದ ಸಾವಿತ್ರಿಬಾಯಿ ಫುಲೆ ರಂಗಮಂದಿರದ ಆವರಣದಲ್ಲಿ 72ನೇ ಗಣರಾಜೋತ್ಸವ ಆಚರಣೆಯ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಅವರು‌ ಮಾತನಾಡಿದರು. ಭಾರತ ಸಂವಿಧಾನ ಜಾರಿಯಾಗಿ 72 ವರ್ಷ ಕಳೆದಿವೆ. ಸಂವಿಧಾನ ಮೂಲ ಆಶಯದಂತೆ ದೇಶ ನಡೆಯುತ್ತಿದೆ. ಪ್ರಪಂಚದಲ್ಲೇ ಬೃಹತ್ ಸಂವಿಧಾನ ನಮ್ಮದಾಗಿದೆ. ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿದೆ.
ಕೊರೊನಾ ಮಾರಿಯ ವಿರುದ್ಧ ಹೋರಾಡಲು ನಮ್ಮ ದೇಶ ಕಂಡು ಹಿಡಿದ ವ್ಯಾಕ್ಸಿನೇಷನ್​‌ಗೆ ಪ್ರಂಪಂಚದಲ್ಲಿ ಹೆಚ್ವಿನ ಬೇಡಿಕೆ ಇದೆ. ಅಂತಹ ವಿಜ್ಞಾನಿಗಳು, ವೈದ್ಯರು ಹಾಗೂ ಸಂಶೋಧನೆಯ ವ್ಯವಸ್ಥೆ ನಮ್ಮಲಿದೆ.
ಇದು ದೇಶದ ಹಿರಿಮೆ. ಆದ್ರೆ, ಸಂವಿಧಾನ ದಿನದಂದು ರೈತರು ಪ್ರತಿಭಟನೆಗಿಳಿಯುವ ಪರಿಸ್ಥಿತಿ ಬರಬಾರದಿತ್ತು. ಸರ್ಕಾರ ದೇಶದ ರೈತರ ಹಿತರಕ್ಷಣೆಗೆ ಪೂರಕವಾದ, ರೈತರು ಒಪ್ಪುವ ಕಾಯ್ದೆ‌ ಹಾಗೂ ಕಾನೂನುಗಳನ್ನು ಜಾರಿಗೆ ತರುವುದು‌ ಒಳಿತು ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕ ಕಳೆಯಿತು. ಸಂವಿಧಾನ ಜಾರಿಗೆಯಾಗಿ‌ 72 ವರ್ಷವಾಯಿತು, ಆದರೆ ದೇಶದಲ್ಲಿ ರಾಜಕೀಯ ಸಮಾನತೆ ಪ್ರಜೆಗಳಿಗೆ ಸಿಕ್ಕಿದೆಯೇ ಹೊರತು, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಕ್ಕಿಲ್ಲ ಎಂದರು.

ABOUT THE AUTHOR

...view details