ಕರ್ನಾಟಕ

karnataka

ಗೆಳೆಯರ ಜೊತೆ ನದಿ ನೋಡಲು ಹೋಗಿದ್ದ ಕಾರ್ಮಿಕ ಸಾವು

By

Published : Apr 4, 2021, 11:01 PM IST

ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

man-dies-after-fall-into-kaveri-river-in-kollegala
ಕಾರ್ಮಿಕ ಸಾವು

ಕೊಳ್ಳೇಗಾಲ :ಸ್ನೇಹಿತರೊಡನೆ ನದಿ ಬಳಿ ಹೋಗಿದ್ದ ಕಾರ್ಮಿಕನೋರ್ವ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ವೆಸ್ಲಿ ಸೇತುವೆ ಸಮೀಪದ ಕಾವೇರಿ ನದಿ ತೀರದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಶರಣಪ್ಪ (28) ಎಂಬಾತ ಮೃತ ದುರ್ದೈವಿ. ಈತ ಮಹದೇಶ್ವರ ಬೆಟ್ಟದ ರಸ್ತೆ ಕಾಮಗಾರಿಯಲ್ಲಿ ಮಿಷನ್ ಹೆಲ್ಪರ್ ಆಗಿ ಕೆಲಸ‌ ಮಾಡುತ್ತಿದ್ದ. ದೊಡ್ಡಿಂದುವಾಡಿ ಗ್ರಾಮದ ಬಳಿ ಕ್ಯಾಂಪ್​ನ ಕೆಲಸಗಾರರ ಜೊತೆ ವಾಸವಿದ್ದ.

ಭಾನುವಾರ ರಜೆ ಕಾರಣ ಶರಣಪ್ಪ ಆರು ಮಂದಿ ಗೆಳೆಯರ ಜೊತೆ ಸತ್ತೇಗಾಲ ಸಮೀಪದ ವೆಸ್ಲಿ ಸೇತುವೆ ಬಳಿಯ‌ ಕಾವೇರಿ ನದಿಗೆ ತೆರಳಿದ್ದ. ನೀರಿಗೆ ಕಾಲು ಬಿಟ್ಟು ಆಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ. ಶರಣಪ್ಪನಿಗೂ ಹಾಗೂ ಜೊತೆಯಲ್ಲಿದ್ದ ಸ್ನೇಹಿತರಿಗೂ ಈಜು ಬರದ ಕಾರಣ ಈ ಅವಘಡ ಸಂಭವಿಸಿದೆ.

ಕಾಲು ಜಾರಿ ನದಿಗೆ ಬಿದ್ದು ಕಾರ್ಮಿಕ ಸಾವು

ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಚಾಮರಾಜನಗರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details