ಕರ್ನಾಟಕ

karnataka

ETV Bharat / state

ಪತ್ನಿ ಫೋಟೋಗೆ ಹೂ ತರಲೆಂದು ನಡೆದು ಬರುತ್ತಿದ್ದ ವ್ಯಕ್ತಿಯ ಮೇಲೆ ಹರಿದ ಲಾರಿ - chamarajnagar recent news

ಇಂದು ಮಂಗಳವಾರ. ಸಂತೆ ಮಾಡಿಕೊಂಡು ಅಗಲಿದ ಪತ್ನಿಯ ಫೋಟೋಗೆ ಹೂವಿನ ಹಾರ ಹಾಕಬೇಕು ಎಂದುಕೊಂಡು ನಡೆದುಬರುತ್ತಿದ್ದ ವ್ಯಕ್ತಿಯೊಬ್ಬರು ದಾರುಣ ಸಾವು ಕಂಡಿದ್ದಾರೆ.

Man died in accident at chamrajnagar
ಪತ್ನಿ ಫೋಟೋಗೆ ಹೂ ಹಾಕಬೇಕು ಎಂದು ಬಂದವ ಮಸಣಕ್ಕೆ

By

Published : Oct 19, 2021, 10:41 AM IST

ಚಾಮರಾಜನಗರ: ಅಗಲಿದ ಪತ್ನಿಯ ಫೋಟೋಗೆ ಹೂ ಹಾಕಲೆಂದು ಹೂವು ಕೊಳ್ಳಲು ಬಂದಿದ್ದ ಪತಿಗೆ ಮಿನಿ ಲಾರಿ ಗುದ್ದಿದ್ದು, ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಯಳಂದೂರು ಬಸ್ ನಿಲ್ದಾಣ ಸಮೀಪ ನಡೆಯಿತು.

ಯಳಂದೂರು ತಾಲೂಕಿನ ಯರಂಗಬಳ್ಳಿ ನಿವಾಸಿ ಮರಿಸ್ವಾಮಿ (45) ಮೃತ ವ್ಯಕ್ತಿ. ಇಂದು ಮಂಗಳವಾರವಾದ ಹಿನ್ನೆಲೆಯಲ್ಲಿ ಮನೆಗೆ ದಿನಸಿ, ಪತ್ನಿ ಫೋಟೋಗೆ ಹೂವಿನ ಹಾರ ಖರೀದಿಸಲು ನಡೆದುಕೊಂಡು ಬರುತ್ತಿದ್ದ ವೇಳೆ ಸಂತೇಮರಹಳ್ಳಿ ಕಡೆಯಿಂದ ಬಂದ ಮಿನಿ ಲಾರಿ ಡಿಕ್ಕಿ ಹೊಡೆದಿದೆ.

ತಲೆ ಮೇಲೆಯೇ ಹರಿದ ಲಾರಿ

ಮೃತ ವ್ಯಕ್ತಿಗೆ ತಂದೆ-ತಾಯಿ ಇದ್ದಾರೆ. ಕಳೆದ ನಾಲ್ಕು ತಿಂಗಳ‌ ಹಿಂದೆ ಕೊರೊನಾಗೆ ಸಿಲುಕಿ ಪತ್ನಿ ಸಾವಿಗೀಡಾಗಿದ್ದರು.

ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details