ಕರ್ನಾಟಕ

karnataka

ETV Bharat / state

ಚಾಮರಾಜನಗರ: ಆನೆಗೆ ಕಬ್ಬು ಕೊಟ್ಟ ಲಾರಿ ಚಾಲಕನಿಗೆ 75 ಸಾವಿರ ರೂ. ದಂಡ

ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಕೊಟ್ಟ ಲಾರಿ ಚಾಲಕನಿಗೆ 75 ಸಾವಿರ ದಂಡ.

lorry driver who gave sugarcane to elephant fined 75 thousand
ಗಜರಾಜನಿಗೆ ಕಬ್ಬು ಕೊಟ್ಟ ಲಾರಿ ಚಾಲಕನಿಗೆ 75 ಸಾವಿರ ದಂಡ

By

Published : Dec 6, 2022, 6:26 AM IST

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರು ಬಂದ ಗಜರಾಜನಿಗೆ ಕಬ್ಬು ಕೊಟ್ಟ ಲಾರಿ ಚಾಲಕನಿಗೆ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ಬರೋಬ್ಬರಿ 75 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಸಿದ್ಷರಾಜು ಎಂಬುವರು ದಂಡ ಹಾಕಿಸಿಕೊಂಡಿರುವ ಚಾಲಕ.

ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಚಾಲಕ ಸಿದ್ದರಾಜು ಎಸೆದಿದ್ದಾರೆ. ಗಸ್ತು ತಿರುಗುತ್ತಿದ್ದ ವೇಳೆ ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಪೂರ್ವಾಪರ ವಿಚಾರಿಸಿ ದಂಡ ಹಾಕಿದ್ದಾರೆ.

ದಂಡ ಕಟ್ಟುವ ತನಕ ಲಾರಿ ಬಿಡದ ಹಿನ್ನೆಲೆ ಚಾಲಕ ಸಿದ್ದರಾಜು ದಂಡ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬಿನ ರುಚಿಗಾಗಿ ಆನೆಗಳು ಆಗಾಗ್ಗೆ ಲಾರಿಗಳಿಗೆ ಅಡ್ಡ ಹಾಕಿ ಕಬ್ಬು ವಸೂಲಿ ಮಾಡುವುದು ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಆಸನೂರು ಭಾಗದಲ್ಲಿ ಸಾಮಾನ್ಯವಾಗಿದೆ. ಲಾರಿ ಚಾಲಕನಿಗೆ ಈ ಪರಿ ದಂಡ ವಿಧಿಸಿರುವುದು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.

ಇದನ್ನೂ ಓದಿ :ಚಾಮರಾಜನಗರ : ಮತ್ತೆ ಆನೆ ದಾದಾಗಿರಿ ಪ್ರಾರಂಭ, ಲಾರಿ ತಡೆಗಟ್ಟಿ ಕಬ್ಬು ವಸೂಲಿ!!

ABOUT THE AUTHOR

...view details