ಕರ್ನಾಟಕ

karnataka

ETV Bharat / state

ಚೀನಾ ವಸ್ತು ಬಹಿಷ್ಕರಿಸಿ, ಬುದ್ಧಿಜೀವಿಗಳಿಗೆ ತಕ್ಕ ಉತ್ತರ ನೀಡೋಣ: ಆರ್​​ಎಸ್​ಎಸ್​ ಮುಖಂಡ ಮಹೇಂದ್ರ - India China Latest News

ಚೀನಾದೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಚಾಮರಾಜನಗರದಲ್ಲಿ ಗೌರವ ನಮನ ಸಲ್ಲಿಸಲಾಉಯಿತು. ಅಲ್ಲದೆ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ, ಬುದ್ದಿ ಜೀವಿಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂಧು ಆರ್​​ಎಸ್​​ಎಸ್​​ ಮುಖಂಡ ಮಹೇಂದ್ರ ಕರೆ ನೀಡಿದರು.

Let boycott of China then answers to intellectuals: RSS leader Mahendra
ಚೀನಾ ವಸ್ತು ಬಹಿಷ್ಕರಿಸಿ, ಬುದ್ಧಿಜೀವಿಗಳಿಗೆ ತಕ್ಕ ಉತ್ತರ ನೀಡೋಣ: ಆರ್​​ಎಸ್​ಎಸ್​ ಮುಖಂಡ ಮಹೇಂದ್ರ

By

Published : Jun 17, 2020, 9:35 PM IST

ಚಾಮರಾಜನಗರ:ಚೀನಾ ವಸ್ತುಗಳನ್ನು ತಿರಸ್ಕರಿಸುವ ಜೊತೆಗೆ ಚೀನಾದ ಮೇಲೆ ಮೋಹವಿರುವ ಬುದ್ದಿಜೀವಿಗಳಿಗೆ ತಕ್ಕ ಉತ್ತರ ನೀಡಬೇಕಿದೆ ಎಂದು ಆರ್​​ಎಸ್​​ಎಸ್ ಮುಖಂಡ ಮಹೇಂದ್ರ ಹೇಳಿದರು‌

ಹಿಂದೂ ಜಾಗರಣ ವೇದಿಕೆ ವತಿಯಿಂದ ನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಆಯೋಜಿಸಿದ್ದ ಚೀನಾ ಸಂಘರ್ಷದಲ್ಲಿ ಮಡಿದ ವೀರಯೋಧರಿಗೆ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ನಾವೆಲ್ಲಾ ಸೈನಿಕರಾಗಿ ಚೀನಾದ ವಿರುದ್ಧ ಹೋರಾಡಬೇಕಿದ್ದು ಚೀನಾ ವಸ್ತುಗಳನ್ನು ತಿರಸ್ಕರಿಸಿ ಸ್ವಾವಲಂಬಿ ಭಾರತ ಕಟ್ಟಬೇಕಿದೆ ಎಂದರು. ಇಲ್ಲೇ ಎಲ್ಲಾ ಸೌಲಭ್ಯ ಪಡೆದು ಚೀನಾದ ಪರ ಮಾತನಾಡುವ ಲದ್ದಿಜೀವಿಗಳಿಗೆ ತಕ್ಕ ಉತ್ತರ ನೀಡಬೇಕಿದೆ ಆತ್ಮ ನಿರ್ಭರ್​ ಭಾರತವಾಗಬೇಕಿದೆ ಎಂದರು.

ಈ ಹಿಂದಿದ್ದಂತ ಭಾರತ ಈಗಿಲ್ಲ, ಭಾರತ ಸಶಕ್ತವಾಗಿದೆ, ಸಮಾಜ ಬಲಿಷ್ಟವಾಗಿದೆ ಎಂಬುದನ್ನು ಚೀನಾಗೆ ಸೃಷ್ಟಿಸುವ ಅನಿವಾರ್ಯತೆ ಎದುರಾಗಿದೆ. ಹುತಾತ್ಮರಾದ ಸೈನಿಕರ ಜೀವವನ್ನು ವ್ಯರ್ಥವಾಗಲು ನಾವು ಬಿಡಬಾರದು ಎಂದು ಕರೆ ನೀಡಿದರು. ಇದಕ್ಕೂ ಮುನ್ನ, 3 ನಿಮಿಷ ಮಡಿದ ಯೋಧರಿಗೆ ಮೌನಾಚರಣೆ ಸಲ್ಲಿಸಿದರು.

ABOUT THE AUTHOR

...view details