ಕರ್ನಾಟಕ

karnataka

ETV Bharat / state

ಬಿಜೆಪಿಗೆ ತಾಕತ್ ಇದ್ರೆ ಗೋಮಾಂಸ ರಫ್ತು ನಿಲ್ಲಿಸಲಿ: ಬಿಎಸ್​ಪಿ ರಾಜ್ಯಾಧ್ಯಕ್ಷ - BSP state president Krishnamurthy news

ಗೋಮಾಂಸ ರಫ್ತುದಾರರಿಂದ 2018ರಲ್ಲಿ ಬಿಜೆಪಿ ಪಾರ್ಟಿ 480 ಕೋಟಿ ರೂ. ಹಣವನ್ನು ಫಂಡ್ ಪಡೆದಿದೆ.‌ ಗೋಹತ್ಯೆ ನಿಷೇಧದ ಕಾನೂನನ್ನು ತರಲು ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ. ಗೋ ರಕ್ಷಣೆ ಹೆಸರಿನಲ್ಲಿ ನೂರಾರು ಮಂದಿಯನ್ನು ಕೊಂದಿರುವ ಬಿಜೆಪಿ ಅಂಗಸಂಸ್ಥೆಗಳಿಗೆ ಈ ಕಾಯ್ದೆ ಮೂಲಕ ರಕ್ಷಣೆ ದೊರಕಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದ್ದಾರೆ.

ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲ್​
ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲ್​

By

Published : Dec 11, 2020, 7:24 PM IST

ಚಾಮರಾಜನಗರ: ಬಿಜೆಪಿಯವರಿಗೆ ತಾಕತ್ ಇದ್ದರೆ ಗೋಹತ್ಯೆ ನಿಷೇಧಿಸುವ ಬದಲು ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲು​ ಹಾಕಿದ್ದಾರೆ.

ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, 2019 ರಲ್ಲಿ ಗೋಮಾಂಸ ರಫ್ತುದಾರರಿಂದ 480 ಕೋಟಿ ರೂ. ಹಣವನ್ನು ಬಿಜೆಪಿ ಪಾರ್ಟಿ ಫಂಡ್ ಪಡೆದಿದೆ.‌ ಅವರ ಲಾಬಿಗೆ ಮಣಿದು, ಹೆಚ್ಚಿನ ರಫ್ತು ಮಾಡುವ ಉದ್ದೇಶ ಇದರಲ್ಲಿ ಅಡಗಿದೆ. ಇದು ರಾಜಕೀಯ ದುರ್ಲಾಭದ ಕಾನೂನಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.

ಬಿಎಸ್​ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಸವಾಲ್​

ನರೇಂದ್ರ ಮೋದಿ ಅವರಿಗೆ ಗೋವಿನ ಮೇಲೆ ನಿಜವಾದ ಪ್ರೀತಿ ಇದ್ದರೆ, ವಿಶ್ವದಲ್ಲೇ ಭಾರತ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನಕ್ಕೆ ಹೋಗುತ್ತಿರಲಿಲ್ಲ. ಗೋಹತ್ಯೆ ನಿಷೇಧದ ಕಾನೂನನ್ನು ತರಲು ಬಿಜೆಪಿ ಅವರಿಗೆ ನೈತಿಕತೆಯೇ ಇಲ್ಲ, ಗೋ ರಕ್ಷಣೆ ಹೆಸರಿನಲ್ಲಿ ನೂರಾರು ಮಂದಿಯನ್ನು ಕೊಂದಿರುವ ಬಿಜೆಪಿ ಅಂಗಸಂಸ್ಥೆಗಳಿಗೆ

ಓದಿ:ಆರ್.ಅಶೋಕ್ ಭೇಟಿಯಾದ ಕುರುಬೂರು: ಗ್ರೀನ್ ಬರ್ಡ್ಸ್ ಆಗ್ರೋ ಕಂಪನಿ ವಿರುದ್ಧ ಕ್ರಮಕ್ಕೆ ಮನವಿ

ತರಾತುರಿಯಲ್ಲಿ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ವಿಧೇಯಕವನ್ನು ಬಿಎಸ್​ಪಿ ಖಂಡಿಸಲಿದ್ದು, ಇದೇ 15 ರಂದು ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಹೋರಾಟ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ABOUT THE AUTHOR

...view details