ಕರ್ನಾಟಕ

karnataka

ETV Bharat / state

ಚಾಮರಾಜನಗರ: ಬೇಟೆ ಹುಡುಕಿ ಬಂದು ಜಮೀನಿನ ಪಂಪ್ ಹೌಸ್‌ನಲ್ಲಿ ಚಿರತೆ ಲಾಕ್‌..!

ಚಾಮರಾಜನಗರದ ಮೂಡ್ನಾಕೂಡು ಗ್ರಾಮದಲ್ಲಿ ಆಹಾರ ಹರಿಸಿ ಬಂದಿದ್ದ ಚಿರತೆಯೊಂದು ಪಂಪ್‌ಹೌಸ್‌ನಲ್ಲಿ ಲಾಕ್ ಆಗಿರುವ ಘಟನೆ ನಡೆದಿದೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪಶು ವೈದ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ಅರಣ್ಯಕ್ಕೆ ಬಿಡಲಾಗಿದೆ.

Leopard Lock at the Farm Pump House in chamarajanagar district
ಚಾಮರಾಜನಗರ: ಬೇಟೆ ಹುಡುಕಿ ಬಂದು ಜಮೀನಿನ ಪಂಪ್ ಹೌಸ್‌ನಲ್ಲಿ ಚಿರತೆ ಲಾಕ್‌..!

By

Published : Jan 3, 2022, 1:38 PM IST

ಚಾಮರಾಜನಗರ:ಬೇಟೆ ಅರಸಿ ನಾಡಿಗೆ ಬಂದ ಚಿರತೆಯೊಂದು ಜಮೀನಿನ ಪಂಪ್ ಹೌಸ್‌ನಲ್ಲಿ ಬಂಧಿಯಾದ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಸಮೀಪದ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತರೊಬ್ಬರ ಪಂಪ್ ಹೌಸ್‌ನಲ್ಲಿ ಸುಮಾರು 3 - 4 ವರ್ಷದ ಗಂಡು ಚಿರತೆ ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.‌ ಸ್ಥಳಕ್ಕೆ ದೌಡಾಯಿಸಿದ ಪಶು ವೈದ್ಯಾಧಿಕಾರಿಗಳು ಚಿರತೆಗೆ ಅರವಳಿಕೆ ನೀಡಿ ನಂತರ ಅರಣ್ಯಕ್ಕೆ ಬಿಟ್ಟಿದ್ದಾರೆ.

ಸದ್ಯ ಚಿರತೆ ಆರೋಗ್ಯವಾಗಿದ್ದು, ಮೈಮೇಲೆ ಯಾವುದೇ ಗಾಯಗಳು ಇರಲಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಳೆದ 5 ತಿಂಗಳಿನಲ್ಲಿ ಸೆರೆಯಾದ 5ನೇ ಚಿರತೆ ಇದಾಗಿದೆ.

ಇದನ್ನೂ ಓದಿ:ಚಾಮರಾಜನಗರ: ಹುಲಿಗಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆ, ರೈತರಿಗೆ ತಪ್ಪದ ಆತಂಕ

For All Latest Updates

TAGGED:

ABOUT THE AUTHOR

...view details