ಕರ್ನಾಟಕ

karnataka

ETV Bharat / state

ಚಾಮರಾಜನಗರ: ರಸ್ತೆಯ ಮೇಲೆ ಚಿರತೆ ಮೃತದೇಹ ಪತ್ತೆ, ವಾಹನ ಡಿಕ್ಕಿ ಶಂಕೆ - ಚಾಮರಾಜನಗರದಲ್ಲಿ ಚಿರತೆ ಸಾವು

ಚಿರತೆ ಮೃತಪಟ್ಟಿರುವ ಪ್ರದೇಶ ಬಿಳಿಗಿರಿರಂಗನಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಗೆ ಬರಲಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

leopard-dead
ಚಿರತೆ ಮೃತದೇಹ

By

Published : Feb 22, 2022, 10:57 AM IST

ಚಾಮರಾಜನಗರ:ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಗುರುಮಲ್ಲಪ್ಪನದೊಡ್ಡಿ ಎಂಬಲ್ಲಿ ರಸ್ತೆಯ ಮೇಲೆ ಚಿರತೆಯ ಕಳೇಬರ ದೊರೆತಿದೆ.

ಮೃತಪಟ್ಟಿರುವ ಚಿರತೆಯ ದೇಹದಲ್ಲಿ ಯಾವುದೇ ಗಾಯಗಳಾಗಲಿ, ರಕ್ತಸ್ರಾವವಾಗಲಿ ಕಂಡುಬಂದಿಲ್ಲ. ಆದರೂ ವಾಹನ ತಲೆಗೆ ಡಿಕ್ಕಿ ಹೊಡೆದು ಅಸುನೀಗಿದೆ ಎಂದು ಹೇಳಲಾಗಿದೆ. ಈ ರಸ್ತೆಯು ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಿದ್ದು, ಮೂರು ಭಾರಿ ವಾಹನಗಳು ಸಂಚರಿಸಿರುವ ಮಾಹಿತಿಯನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿದೆ.

ಸದ್ಯ, ಚಿರತೆ ಮೃತಪಟ್ಟಿರುವ ಪ್ರದೇಶ ಬಿಳಿಗಿರಿರಂಗನಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಗೆ ಬರಲಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಬಿದ್ದು 10 ಜನರ ದುರ್ಮರಣ

ABOUT THE AUTHOR

...view details