ಕರ್ನಾಟಕ

karnataka

ETV Bharat / state

'ಪ್ರೇಮಿಗಳ‌ ದಿನಕ್ಕೆ 5 ದಿನ‌ ರಜೆ ಕೊಡಿ‌ ಸರ್'; ವೈರಲ್ ಆಯ್ತು ಕೊಳ್ಳೇಗಾಲ ವಿದ್ಯಾರ್ಥಿಯ ರಜಾ ಅರ್ಜಿ - leave application for valentines day

ಪ್ರೇಮಿಗಳ‌ ದಿನ ಹತ್ತಿರ ಬರುತ್ತಿದ್ದು,‌ ಹುಡುಗಿಯರ ಕಾಟ ತಡೆಯಲಾಗುತ್ತಿಲ್ಲ, ತನಗೆ 5 ದಿನ ರಜೆ ಬೇಕೆಂದು‌ ಕಳೆದ 9 ರಂದು ಕೊಳ್ಳೇಗಾಲ ವಿದ್ಯಾರ್ಥಿಯೋರ್ವ ಬರೆದ ರಜಾ ಅರ್ಜಿ ಸಾಮಾಜಿಕ‌ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗಿದೆ.

leave application is going viral which wrote with the reason of valentines day
'ಪ್ರೇಮಿಗಳ‌ ದಿನಕ್ಕೆ 5 ದಿನ‌ ರಜೆ ಕೊಡಿ‌ ಸರ್'; ವೈರಲ್ ಆಯ್ತು ಕೊಳ್ಳೇಗಾಲ ವಿದ್ಯಾರ್ಥಿಯ ರಜಾ ಅರ್ಜಿ

By

Published : Feb 11, 2021, 9:12 AM IST

Updated : Feb 11, 2021, 10:11 AM IST

ಚಾಮರಾಜನಗರ: ಪ್ರೇಮಿಗಳ‌ ದಿನದ ಪ್ರಯುಕ್ತ 5 ದಿನಗಳ ಕಾಲ ರಜೆ ಕೊಡಿ‌ ಸರ್ ಎಂದು ಕೊಳ್ಳೇಗಾಲ ವಿದ್ಯಾರ್ಥಿಯೋರ್ವನ ರಜಾ ಅರ್ಜಿ ಸಾಮಾಜಿಕ‌ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗಿದೆ.

ವಿದ್ಯಾರ್ಥಿಯ ರಜಾ ಅರ್ಜಿ

ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ‌ ಶಿವರಾಜು ಎಸ್ ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ಅರ್ಜಿ ಇದ್ದು, ಸಾಲದ್ದಕ್ಕೆ ಪ್ರಾಂಶುಪಾಲ ಸೀಗನಾಯಕ ಅವರ ಹಸಿರು ಶಾಹಿಯ ಸಹಿ‌, ಮೊಹರು ಕೂಡ ಇದೆ. ಸದ್ಯ ವಾಟ್ಸಾಪ್, ಎಫ್​ಬಿಯಲ್ಲಿ‌ ಈ ರಜೆ ಅರ್ಜಿ ಸಖತ್ ಸದ್ದು ಮಾಡುತ್ತಿದೆ. ಪ್ರೇಮಿಗಳ‌ ದಿನ ಹತ್ತಿರ ಬರುತ್ತಿದ್ದು,‌ ಹುಡುಗಿಯರ ಕಾಟ ತಡೆಯಲಾಗುತ್ತಿಲ್ಲ, ತನಗೆ 5 ದಿನ ರಜೆ ಬೇಕೆಂದು‌ ಕಳೆದ 9ರಂದು ಈ ಅರ್ಜಿ ಬರೆಯಲಾಗಿದೆ.‌

ಈ ಸುದ್ದಿಯನ್ನೂ ಓದಿ:ಉಪ್ಪಾರ ಸಮುದಾಯದ ಬೇಡಿಕೆ ಈಡೇರಿಸಲು ಬದ್ದ : ಸಚಿವ ಕೆ.ಎಸ್.​ ಈಶ್ವರಪ್ಪ

ಈ ಬಗ್ಗೆ ಪ್ರಾಂಶುಪಾಲ ಸೀಗನಾಯಕ ಪ್ರತಿಕ್ರಿಯಿಸಿದ್ದು, ತನ್ನ ಸಹಿಯನ್ನು ಯಾರೋ ನಕಲಿ‌ ಮಾಡಿ, ಕದ್ದು ಮೊಹರನ್ನು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಲಾಕ್​ಡೌನ್​​ ವೇಳೆ ಬಾಡೂಟಕ್ಕಾಗಿ ರಜೆ ಅರ್ಜಿ ಸಲ್ಲಿಸಿದ್ದ ಪೊಲೀಸಪ್ಪನಂತೆ ಈಗ ವಿದ್ಯಾರ್ಥಿ ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಕೆಲವರಿಗೆ ಹಾಸ್ಯ ಎನಿಸಿದರೆ, ಕೆಲವರಲ್ಲಿ ಆಕ್ರೋಶ ಉಂಟು ಮಾಡಿದೆ.

Last Updated : Feb 11, 2021, 10:11 AM IST

ABOUT THE AUTHOR

...view details