ಕೊಳ್ಳೇಗಾಲ: ರಾಜ್ಯಾದ್ಯಂತ ಪುನೀತ್ ಅಭಿಮಾನ ಮೆರೆಯಲಾಗುತ್ತಿದೆ. ಅದರಂತೆ ಜಿಲ್ಲೆಯ ಕೊಳ್ಳೇಗಾಲದ ರಸ್ತೆಯೊಂದಕ್ಕೆ ಪುನೀತ್ ರಾಜ್ಕುಮಾರ್ ಎಂದು ನಾಮಕರಣ ಮಾಡಲಾಗಿದೆ.
ಸ್ಥಳೀಯ ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ಅಭಿಮಾನಿಗಳು ಪಟ್ಟಣದ ಅಚ್ಗಾಳ ಸರ್ಕಲ್ನಿಂದ ತಾಲೂಕು ಪಂಚಾಯತ್ ವೃತ್ತದವರೆಗಿರುವ ರಸ್ತೆಗೆ 'ರಾಜರತ್ನ ಪುನೀತ್ ರಾಜ್ಕುಮಾರ್' ರಸ್ತೆ ಎಂದು ನಾಮಕರಣ ಮಾಡಿದರು. ಅಲ್ಲದೇ, ನಾಮಫಲಕದ ಬೋಡ್೯ಗೆ ಪೂಜೆ ಸಲ್ಲಿಸಿ ಅನಾವರಣ ಮಾಡಿದರು.