ಕರ್ನಾಟಕ

karnataka

ETV Bharat / state

ಮನೆಗಳತ್ತ ಪ್ರವಾಹ ಸಂತ್ರಸ್ತರು... ಹಲವು ಮನೆಗಳು ಜಖಂ- ಸಾಂಕ್ರಾಮಿಕ ರೋಗದ ಭೀತಿ!

ಕಾವೇರಿ ನದಿಯಲ್ಲಿನ ಪ್ರವಾಹ ಇಳಿಮುಖವಾದ ಹಿನ್ನೆಲೆಯಲ್ಲಿ ಪರಿಹಾರ ಕೇಂದ್ರದಲ್ಲಿದ್ದ ಕೊಳ್ಳೇಗಾಲ ತಾಲೂಕಿನ ಗ್ರಾಮಗಳ ಜನರು ತಮ್ಮ ಮನೆಗಳತ್ತ ಮರಳಿದ್ದಾರೆ.

ಪ್ರವಾಹ ಸಂತ್ರಸ್ತರು

By

Published : Aug 13, 2019, 5:40 PM IST

ಚಾಮರಾಜನಗರ:ಕಾವೇರಿ ಪ್ರವಾಹದಿಂದ ಜಲಾವೃತವಾಗಿದ್ದ ಕೊಳ್ಳೇಗಾಲ ತಾಲೂಕಿನ ಗ್ರಾಮಗಳಲ್ಲಿ ನೆರೆ ಇಳಿಮುಖವಾಗಿದ್ದು, ಪರಿಹಾರ ಕೇಂದ್ರದಿಂದ ಸಂತ್ರಸ್ತರು ಮನೆಯತ್ತ ಮುಖ ಮಾಡುತ್ತಿದ್ದಾರೆ.

ಕುಸಿದುಬಿದ್ದ ಮನೆ

ದಾಸನಪುರ, ಹಳೇ ಅಣಗಹಳ್ಳಿ, ಹಳೇ ಹಂಪಾಪುರ, ಹರಳೆ ಗ್ರಾಮಗಳಲ್ಲಿ 25ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಕುಸಿದು ಬೀಳುವ ಹಂತ ತಲುಪಿವೆ. ಮನೆಗಳ ಒಳಗೆ ನಿಂತ ನೀರನ್ನು ಹೊರಚೆಲ್ಲುವ ಕಾರ್ಯದಲ್ಲಿ ಜನರು ತೊಡಗಿಕೊಂಡಿದ್ದು, ಪ್ರವಾಹದ ಬಳಿಕ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ. ಜಮೀನುಗಳಲ್ಲಿ ಇನ್ನೂ ನೀರು ನಿಂತಿದ್ದು, ಬಹುಪಾಲು ಬೆಳೆ ನೆಲಕಚ್ಚಿದೆ. ಸ್ಥಳೀಯ ಶಾಸಕ ಎನ್.ಮಹೇಶ್ ಶೀಘ್ರ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

ಮನೆಗಳತ್ತ ಮರಳಿದ ಪ್ರವಾಹ ಸಂತ್ರಸ್ತರು

ದಾಸನಪುರ ಗ್ರಾಮ ಪ್ರವಾಹಕ್ಕೆ ಹೆಚ್ಚು ನಲುಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಗುಂಡಿ ಬಿದ್ದಿವೆ. ಹಾನಿಯಾದ ಗ್ರಾಮಗಳಿಗೆ ಡಿಸಿ ಬಿ.ಬಿ‌. ಕಾವೇರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details