ಕೊಳ್ಳೇಗಾಲ: ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಓರ್ವರಿಗೆ ಶನಿವಾರ ಕೊರೊನಾ ತಪಾಸಣೆ ಮಾಡಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ.
ಕಾನ್ಸ್ಟೇಬಲ್ಗೆ ಕೊರೊನಾ: ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್ - ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್
ಪೊಲೀಸ್ ಕಾನ್ಸ್‌ಟೇಬಲ್ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.
ಕಾನ್ಸ್ಟೇಬಲ್ಗೆ ಕೊರೊನಾ: ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್
ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವೃತ್ತ ನೀರಿಕ್ಷಕರ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಸೋಂಕಿತ ಕಾನ್ಸ್‌ಟೇಬಲ್ ಇದ್ದ ಪೊಲೀಸ್ ಕ್ವಾಟ್ರಸ್ ಕೂಡ ಸೀಲ್ ಮಾಡಲಾಗಿದೆ.
ಅಗತ್ಯವಿದ್ದರೆ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದ ಸಹದ್ಯೋಗಿಗಳಿಗೂ ಕೊರೊನಾ ಟೆಸ್ಟ್ ಮಾಡಲಾಗುವುದು ಎಂದು ತಿಳಿದು ಬಂದಿದೆ. ಸ್ವತಃ ಸಿಪಿಐ ಶ್ರೀಕಾಂತ್ ಹೋಂ ಕ್ವಾರಂಟೈನ್ ಆಗಿದ್ದಾರೆ.